ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಎಸ್ ಧೋನಿ 2017-18ರ ಆರ್ಥಿಕ ವರ್ಷದಲ್ಲಿ ಜಾರ್ಖಂಡ್ ನಲ್ಲಿ ಅತಿ ಹೆಚ್ಚಿನ ಮೊತ್ತದ ಆದಾಯ ತೆರಿಗೆ ಪಾವತಿಸಿದ್ದಾರೆ.
ಪೋರ್ಬ್ಸ್ ಮಾಹಿತಿ ಪ್ರಕಾರ, ವಿರಾಟ್ ಕೊಹ್ಲಿ, ಸಚಿನ್ ತೆಂಡೊಲ್ಕರ್ ನಂತರ ಎಂಎಸ್ ಧೋನಿ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಂಪಾದಿಸುತ್ತಿರುವ ಆಟಗಾರರಾಗಿದ್ದಾರೆ. 2017 ನೇ ಸಾಲಿನ ಅತಿ ಹೆಚ್ಚು ಆದಾಯ ಗಳಿಸುವ ಭಾರತದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಂದಾಜು 63. 7 ಕೋಟಿ ರೂ ಆದಾಯ ಗಳಿಕೆಯೊಂದಿಗೆ ಧೋನಿ 8 ನೇ ಸ್ಥಾನದಲ್ಲಿದ್ದರು.
ಆದರೆ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿರುವುದು ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ವಿಶೇಷವಾಗಿ 2019ರ ವಿಶ್ವಕಪ್ ಪಂದ್ಯಾವಳಿಯಲ್ಲೂ ಅವರ ಗಮನ ಹರಿಸುವಂತೆ ಮಾಡಿದೆ.
37 ವರ್ಷದ ಧೋನಿ ಅವರಿಗೆ ಅತಿ ಹೆಚ್ಚಿನ ವಯಸ್ಸೇನೂ ಆಗಿಲ್ಲ. ಆದರೆ, ಅವರ ಬ್ಯಾಟಿಂಗ್ ಬಗ್ಗೆಯೇ ಎಲ್ಲರಿಗೂ ಆತಂಕ ಕಾಡುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿನ ಧೋನಿ ಪ್ರದರ್ಶನ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ, ಕೋಚ್ ರವಿಶಾಸ್ತ್ರಿ ಎಲ್ಲಾ ವದಂತಿಗಳನ್ನು ಅಲ್ಲಗಳೆಯುತ್ತಾ ಬಂದಿದ್ದಾರೆ.