
ಆಗ್ರಾ, ಜು.26- ಮುಂಬೈ-ಅಹಮದಾಬಾದ್ ನಡುವೆ 98,000 ಕೋಟಿ ರೂ. ವೆಚ್ಚದಲ್ಲಿ ಬುಲೆಟ್ ಟ್ರೈನ್ ಯೋಜನೆ ನನಸಾಗುವುದನ್ನು ದೇಶದ ಜನತೆ ಎದುರು ನೋಡುತ್ತಿದ್ದರೆ, ಉತ್ತರ ಪ್ರದೇಶದಲ್ಲಿ ಈಗಾಗಲೇ ಗಂಟೆಗೆ 409 ಕಿ.ಮೀ. ವೇಗದಲ್ಲಿ ಚಲಿಸು ಬುಲೆಟ್ ಟೈನ್ ಕಾರ್ಯನಿರ್ವಸುತ್ತಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು..! ಹೌದಾ ಎಂದು ಹುಬ್ಬೇರಿಸಬೇಡಿ. ಏಕೆಂದರೆ ಇದು ನಿಜವಲ್ಲ. ನಮ್ಮ ರೈಲ್ವೆ ಇಲಾಖೆಯ ವರದಿಯಲ್ಲಿನ ಲೋಪದೋಷಗಳಿಗೆ ಇದೊಂದು ನಿದರ್ಶನ.
ರೈಲ್ವೆ ಇಲಾಖೆಯ ಲೆಕ್ಕಪರಿಶೋಧನಾ ವರದಿಯಲ್ಲಿನ ಇಂಥ ಪ್ರಮಾಧಗಳನ್ನು ಕೇಂದ್ರ ಸರ್ಕಾರದ ಸಿಎಜಿ(ಕಂಪೆÇ್ರೀ ಅಂಡ್ ಅಡಿಟರ್ ಜನರಲ್ ಅಥವಾ ನಿಯಂತ್ರಕರು ಮತ್ತು ಮಹಾ ಲೇಖಪಾಲರು) ಪತ್ತೆ ಮಾಡಿದೆ. ಸಿಎಜಿ ಇತ್ತೀಚೆಗೆ ಆಡಿಟಿಂಗ್ ನಡೆಸಿದಾಗ ಎಕ್ಸ್ಪ್ರೆಸ್ ರೈಲೊಂದು ಗಂಟೆಗೆ 409 ಕಿ.ುೀ.ವೇಗದಲ್ಲಿ ಚಲಿಸುತ್ತದೆ, ಅಲಹಾಬಾದ್-ಫತೇಪುರ್ ನಡುವಣ 116 ಕಿ.ಮೀ. ದೂರದ ಅಂತರವನ್ನು ಕೇವಲ 17 ನಿುಷಗಳಲ್ಲಿ ತಲುಪುತ್ತದೆ ಎಂಬಿತ್ಯಾದಿ ಸ್ಪಷ್ಟ ದೋಷಪೂರಿತ ಸಂಗತಿಗಳು ಪತ್ತೆಯಾದವು.
ಪ್ರಯಾಗ್ ರಾಜ್ ಎಕ್ಸ್ಪ್ರೆಸ್, ಜೈಪುರ್-ಅಲಹಾಬಾದ್ ಎಕ್ಸ್ಪ್ರೆಸ್ ಹಾಗೂ ನ್ಯೂ ಡೆಲ್ಲಿ-ಅಲಹಾಬಾದ್ ಡುರೊಂಟೋ ಎಕ್ಸ್ಪ್ರೆಸ್ ರೈಲಿನ ಲೆಕ್ಕಪರಿಶೋಧನೆ ಮಾಡುವಾಗ ಇಂಥ ದೊಡ್ಡ ತಪ್ಪುಗಳು ಪತ್ತೆಯಾಗಿದ್ದು ರೈಲ್ವೆ ಇಲಾಖೆಯ ಕಾರ್ಯಕ್ಷಮತೆ ಮತ್ತು ಅಂಕಿ-ಅಂಶಗಳ ಮಾಹಿತಿ ಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ.