ತುಮಕೂರು, ಜು.26- ಜಾನುವಾರುಗಳನ್ನು ಕಸಾಯಿ ಖಾನೆಗಳಿಗೆ ಸಾಗಿಸುತ್ತಿದ್ದ ಲಾರಿಗಳನ್ನು ತಡೆದ ಭಜರಂಗ ದಳದ ಕಾರ್ಯಕರ್ತರು, ಒಂದು ಲಾರಿಯನ್ನು ವಶಪಡಿಸಿಕೊಂಡು 13 ದನಗಳನ್ನು ರಕ್ಷಿಸಿರುವ ಘಟನೆ ಇಲ್ಲಿನ ಕ್ಯಾತಸಂದ್ರ ಬಳಿ ಇಂದು ಬೆಳಗಿನ ಜಾವ ನಡೆದಿದೆ.
ತುಮಕೂರು ಸಮೀಪದ ಕ್ಯಾತಸಂದ್ರದ ಶ್ರೀ ರಾಜ್ ಟಾಕೀಸ್ ಮುಂಭಾಗ ಟಾಕೀಸ್ ಮುಂಭಾಗ ರಾಷ್ಟ್ರೀಯ ಹೆದ್ದಾರಿ 48 ರಸ್ತೆಯಲ್ಲಿ ಹೋಗುತ್ತಿದ್ದ 4 ಲಾರಿಗಳಲ್ಲಿ ಜಾನುವಾರು ಇರುವುದರ ಬಗ್ಗೆ ಅನುಮಾನಗೊಂಡ ಗೋ ಗ್ಯಾಂಗ್ ಫೌಂಡೇಷನ್ ಹಾಗೂ ಭಜರಂಗದಳ ಕಾರ್ಯಕರ್ತರು ಲಾರಿಗಳನ್ನು ತಡೆದಿದ್ದಾರೆ. ಈ ವೇಳೆ ಒಂದು ಲಾರಿ ತಂಡಕ್ಕೆ ಸಿಕ್ಕಿಬಿದ್ದಿದ್ದು, ಅವುಗಳಲ್ಲಿದ್ದ 13 ದೇಸಿ ಗೋವುಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಲಾಗಿದೆ. ಲಾರಿ ಚಾಲಕ ಮತ್ತು ಕ್ಲೀನರ್ ಲಾರಿ ನಿಲ್ಲಿಸಿ ಪರಾರಿಯಾಗಿದ್ದಾರೆ.
ನಾಲ್ಕು ಲಾರಿಗಳಲ್ಲಿ ಜಾನುವಾರುಗಳನ್ನು ದಾವಣಗೆರೆಯಿಂದ ಬೆಂಗಳೂರಿನ ಕಸಾಯಿಖಾನೆಗಳಿಗೆ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದ್ದರು. ಮೂರು ಲಾರಿಗಳು ಭಜರಂಗ ದಳದ ಕಾರ್ಯಕರ್ತರ ಕೈಗೆ ಸಿಗದೆ ಹೊರಟುಹೋಗಿವೆ.
ವಿಷಯ ತಿಳಿದ ತಕ್ಷಣ ಕ್ಯಾತಸಂದ್ರ ಪೆÇಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಾರಿಯಾಗಿರುವ ಮೂರು ಲಾರಿಗಳ ಪತ್ತೆಗೆ ಪೆÇಲೀಸರು ಮತ್ತು ಭಜರಂಗ ದಳ ಕಾರ್ಯಕರ್ತರು ಶೋಧ ನಡೆಸಿದ್ದಾರೆ.
ಈ ಬಗ್ಗೆ ಕ್ಯಾತಸಂದ್ರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.