ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್

Varta Mitra News

ಮಳವಳ್ಳಿ,ಜು.26- ಬಸ್‍ಗೆ ಅಡ್ಡವಾಗಿ ಬಂದ ಮಗುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬಸ್ಸನ್ನು ಪಕ್ಕಕ್ಕೆ ತೆಗೆದುಕೊಳ್ಳುತ್ತಿದ್ದಂತೆ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಪ್ರಯಾಣಿಕರೊಬ್ಬರು ಮೃತಪಟ್ಟಿರುವ ಘಟನೆ ಕಿರುಗಾವಲು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತೀ.ನರಸಿಪುರ ತಾಲ್ಲೂಕಿನ ಕುಳ್ಳನಕೊಪ್ಪಲು ನಿವಾಸಿ ಮಹೇಶ್(38) ಮೃತಪಟ್ಟ ದುರ್ದೈವಿ.
ಇಂದು ಬೆಳಗ್ಗೆ 11ರ ಸಮಯದಲ್ಲಿ ತೀ.ನರಸೀಪುರದಿಂದ ಮಳವಳ್ಳಿ ಮುಖಾಂತರ ಬೆಂಗಳೂರಿಗೆ ಹೋಗುತ್ತಿದ್ದ ಭಾರತಿ ಬಸ್‍ಗೆ ಕಿರುಗಾವಲು ಪೆÇಲೀಸ್ ಠಾಣೆ ವ್ಯಾಪ್ತಿಯ ಬುಳ್ಳಕೆಂಪನದೊಡ್ಡಿ ಗೇಟ್ ಬಳಿ ಮಗುವೊಂದು ಅಡ್ಡಬಂದಿದೆ. ಆ ಮಗುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬಸ್‍ನ್ನು ಪಕ್ಕಕ್ಕೆ ತೆಗೆದುಕೊಳ್ಳುತ್ತಿದ್ದಂತೆ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಪರಿಣಾಮ ಒಬ್ಬ ಪ್ರಯಾಣಿಕರು ಮೃತಪಟ್ಟು, 8-10 ಮಂದಿ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ಶಾಸಕರಾದ ಡಾ.ಅನ್ನದಾನಿ, ಅಶ್ವಿನ್‍ಕುಮಾರ್, ಅಡಿಷನಲ್ ಎಸ್ಪಿ ಲಾವಣ್ಯ ಹಾಗೂ ಪೆÇಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ