
ಬೆಂಗಳೂರು: ಕಳೆದ ವಾರಾಂತ್ಯದಲ್ಲಿ ದಿವಂಗತ ವಿಷ್ಣುವರ್ಧನ್ ನಟನೆಯ ನಾಗರಹಾವು ಸಿನಿಮಾ ಬಿಡುಗಡೆಯಾಗಿದ್ದು, ಬೇರೆ ಯಾವ ಸೂಪರ್ ಸ್ಟಾರ್ ಗಳ ಸಿನಿಮಾಗಿಂತ ಕಡಿಮೆಯಿಲ್ಲದಂತೆ ಆರಂಭಿಕ ಒಪನಿಂಗ್ ಪಡೆದಿದೆ. ಬಹು ಬೇಡಿಕೆಯ ನಂತರ ವಿದೇಶದಲ್ಲೂ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.
ಕೆಆರ್ ಜಿ ಸ್ಟುಡಿಯೋ ಅಡಿಯಲ್ಲಿ ಹಂಚಿಕೆ ಪಡೆದಿರುವ ಕಾರ್ತಿಕ್ ಗೌಡ ವಿದೇಶದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಅಹಮದಾಬಾದ್, ಹೈದರಾಬಾದ್ ಮತ್ತಿತರ ರಾಜ್ಯಗಳಲ್ಲಿ ಈ ವಾರ ನಾಗರಹಾವು ಬಿಡುಗಡೆಯಾಲಿದೆ. ಕೂಡಲೇ ವಿದೇಶಗಳಲ್ಲೂ ಬಿಡುಗಡೆಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಬಿಡುಗಡೆ ಮಾಡಲಾಗುತ್ತದೆ, ಅಮೆರಿಕಾ, ಇಂಗ್ಲೆಂಡ್ ಮತ್ತು ಅಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿರುವ ಜನರು ನಾಗರಹಾವು ಸಿನಿಮಾ ಬಿಡುಗಡೆ ಮಾಡುವಂತೆ ಕೇಳಿದ್ದಾರೆ, ವಿದೇಶಗಳಲ್ಲಿ ಬಿಡುಗಡೆ ಮಾಡಲು ನಾನು ಮತ್ತು ಕಾರ್ತಿಕ್ ಅಲ್ಲಿನ ಹಂಚಿಕೆದಾರರನ್ನು ಸಂಪರ್ಕಿಸಿ ಇನ್ನೆರಡು ವಾರಗಳಲ್ಲಿ ರಿಲೀಸ್ ಮಾಡಲಿದ್ದೇವೆ ಎಂದು ಬಾಲಾಜಿ ತಿಳಿಸಿದ್ದಾರೆ.