ಮೆಹ್ಸಾನಾ: ಪಾಟೀದಾರರ ಮೀಸಲಾತಿ ಹೋರಾಟದ ಹೆಸರಲ್ಲಿ 2015ರಲ್ಲಿ ಸಂಭವಿಸಿದ್ದ ಗಲಭೆ ಪ್ರಕರಣದಲ್ಲಿ ಪಾಟಿದಾರ್ ಮೀಸಲಾತಿ ಹೋರಾಟದ ಪ್ರಮುಖ ಹೋರಾಟಗಾರ ಹಾರ್ದಿಕ್ ಪಟೇಲ್ ಅಪರಾದಿ ಎಂದು ಕೋರ್ಟ್ ತೀರ್ಪು ನೀಡಿದೆ.
2015ರಲ್ಲಿ ಪಾಟೀದಾರ್ ಆಂದೋಲನದ ವೇಳೆ ಬಿಜೆಪಿ ಶಾಸಕ ರಿಶಿಕೇಶ್ ಪಟೇಲರ ವಿಸಾನಗರ ಕಚೇರಿ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಲಾಗಿತ್ತು. ಈ ಸಂಬಂಧ ಕೋರ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ಗುಜರಾತ್ ನ ವಿಸಾನಗರ ಕೋರ್ಟ್‌ನಲ್ಲಿ ಈ ಕುರಿತ ವಿಚಾರಣೆ ನಡೆಯುತ್ತಿತ್ತು. ಇದೀಗ ಈ ವಿಚಾರಣೆ ಪೂರ್ಣಗೊಂಡಿದ್ದು, ಇಂದು ಕೋರ್ಟ್ ತನ್ನ ತೀರ್ಪು ನೀಡಿದೆ. ಹಾರ್ದಿಕ್ ಪಟೇಲ್ ಮತ್ತು ಆತನ ಸಹಚರರಾದ ಲಾಲ್ಜೀ ಪಟೇಲ್ ಹಾಗು ಅಂಬಾಲಾಲ್ ಪಟೇಲ್ ರನ್ನು ಕೋರ್ಟ್ ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.
ಅಲ್ಲದೆ ಎಲ್ಲ ಅಪರಾಧಿಗಳಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, ಶಿಕ್ಷೆ ಅಲ್ಲದೇ 50,000 ರೂ.ಗಳ ದಂಡವನ್ನೂ ವಿಧಿಸಲಾಗಿದೆ. ಹಾರ್ದಿಕ್ ಮಾತ್ರವಲ್ಲದೇ ಆತನ ಸಹಚರರಾದ ಲಾಲ್ಜೀ ಪಟೇಲ್ ಹಾಗು ಅಂಬಾಲಾಲ್ ಪಟೇಲ್ ಸಹ ತಪ್ಪಿತಸ್ಥರೆಂದು ಕಂಡುಬಂದಿದ್ದು, ಅವರಿಗೂ ಎರಡು ವರ್ಷಗಳ ಶಿಕ್ಷೆ ಹಾಗು 50,000ರು ದಂಡ ವಿಧಿಸಲಾಗಿದೆ.