
ಮೈಸೂರು,ಜು.24- ನಗರದಲ್ಲಿ ಟ್ರಿನ್-ಟ್ರಿನ್ ಬೈಸಿಕಲ್ ಸೇವೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಚಂದದಾರರ ಸಂಖ್ಯೆ10 ಸಾವಿರ ತಲುಪಿದೆ.
ಟ್ರಿನ್-ಟ್ರಿನ್ ಸೈಕಲ್ ಸೇವೆ ಯಶಸ್ವಿಯಾಗಿದೆ ಎಂಬುದಕ್ಕೆ ಹೆಸರು ನೋಂದಾಯಿಸಿಕೊಂಡಿರುವರ ಸಂಖ್ಯೆ 10 ಸಾವಿರ ದಾಟಿರುವುದೇ ಸಾಕ್ಷಿಯಾಗಿದೆ. ನಗರದಾದ್ಯಂತ 52 ಟ್ರಿನ್-ಟ್ರಿನ್ ಬೈಸಿಕಲ್ ಕೇಂದ್ರಗಳಲ್ಲಿ ಒಂದು ಸಾವಿರ ಮಂದಿ ಬೈಸಿಕಲ್ ಸೇವೆಯನ್ನು ಪ್ರತಿದಿನ ಬಳಸುತ್ತಿದ್ದಾರೆ. ಹೆಚ್ಚಾಗಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕರು, ಸಾರ್ವಜನಿಕರು ಸರ್ಕಾರಿ ನೌಕರರು, ಪ್ರವಾಸಿಗರು ಈ ಸೈಕಲ್ ಸೇವೆಯನ್ನು ಬಳಸುತ್ತಿದ್ದಾರೆ. 2017ರ ಜೂನ್ 4ರಂದು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಹೆಸರು ನೋಂದಾಯಿಸಿಕೊಂಡಿರುವವರ ಸಂಖ್ಯೆ 10 ಸಾವಿರ ದಾಟಿದ.