ಹಾಸ್ಟೆಲ್‍ಗೆ ವಿಕೃತ ಕಾಮಿಯ ಕಾಟ

Varta Mitra News

ಮೈಸೂರು,ಜು.24-ಏಕೋ ಏನೋ ನಗರದ ನರ್ಸಿಂಗ್ ಹಾಸ್ಟೆಲ್‍ಗೆ ವಿಕೃತ ಕಾಮಿಯ ಕಾಟ ತಪ್ಪಿದಂತೆ ಕಾಣುತ್ತಿಲ್ಲ. ದೇವರಾಜ ಠಾಣೆಯ ಕೂಗಳತೆಯಲ್ಲೇ ಕೆ.ಆರ್.ಆಸ್ಪತ್ರೆಯ ನರ್ಸಿಂಗ್ ಹಾಸ್ಟೆಲ್ ಇದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ವಿಕೃತ ಮನಸ್ಸಿನ ಕಳ್ಳನೊಬ್ಬ ಹಾಸ್ಟೆಲ್‍ಗೆ ನುಗ್ಗಿ ವಿದ್ಯಾರ್ಥಿನಿಯರ ಬಟ್ಟೆಯನ್ನು ದೋಚಿದ್ದ. ಅಲ್ಲದೆ ಒಬ್ಬ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಿತ್ತು ಪರಾರಿಯಾಗಿದ್ದ.
ಈ ಸಂಬಂಧ ದೇವರಾಜ ಪೆÇಲೀಸರಿಗೆ ದೂರು ನೀಡಲಾಗಿತ್ತು. ನಿನ್ನೆ ಶಾಸಕ ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಭದ್ರತೆ ನೀಡುವಂತೆ ಆದೇಶಿಸಿದ್ದರು. ಆದರೆ ಇಂದು ಬೆಳಗ್ಗೆ ಮತ್ತೆ ಇದೇ ಕಳ್ಳ ಹಾಸ್ಟೆಲ್‍ಗೆ ನುಗ್ಗಿದ್ದಾನೆ. ತಕ್ಷಣ ವಿದ್ಯಾರ್ಥಿನಿಯರು ಭಯದಿಂದ ಚೀರಿದ್ದಾರೆ. ಇದನ್ನು ಕೇಳಿ ಸಾರ್ವಜನಿಕರು ಧಾವಿಸಿದಾಗ ಕಳ್ಳ ಓಡಿಹೋಗಿದ್ದಾರೆ. ವಿದ್ಯಾರ್ಥಿನಿಯರು ಭಯಭೀತರಾಗಿದ್ದು, ತಕ್ಷಣ ಕಳ್ಳನನ್ನು ಬಂಧಿಸುವಂತೆ ಹಾಗೂ ತಮಗೆ ರಕ್ಷಣೆ ಕೊಡುವಂತೆ ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ