ಜೈಪುರ:ಜು-24: ರಾಜಸ್ಥಾನದ ಆಳ್ವಾರ್ ಸಾಮೂಹಿಕ ಹಲ್ಲೆ ಪ್ರಕರಣದ ಸಂತ್ರಸ್ತ ವ್ಯಕ್ತಿ ಆಘಾತ ಹಾಗೂ ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾನೆಂದು ಮರಣೋತ್ತರ ವರದಿ ತಿಳಿಸಿದೆ.
ಕಳೆದ ಶನಿವಾರ ಆಳ್ವಾರ್ ನಲ್ಲಿ ರಕ್ಬರ್ ಖಾನ್ ಎಂಬ 28 ವರ್ಷದ ವಯಸ್ಸಿನ ಯುವಕನ ಮೇಲೆ ಸಾಮೂಹಿಕ ಹಲ್ಲೆ ನಡೆದಿತ್ತು. ಹಲ್ಲೆಗೊಳಗಾಗಿದ್ದ ವ್ಯಕ್ತಿ ರಕ್ಭರ್ ಖಾನ್ ಅವರು ಆಘಾತ ಹಾಗೂ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾರೆಂದು ಮರಣೋತ್ತರ ವರದಿಗಳಲ್ಲಿ ಹೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಾಜಸ್ಥಾನ ಡಿಜಿಪಿ ಒಪಿ.ಗಲ್ಹೋತ್ರಾ ಅವರು, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಇನ್ನು ಪರಿಸ್ಥಿತಿ ಹಾಗೂ ಪ್ರಕರಣಗಳಿಗೆ ಆದ್ಯತೆ ನೀಡುವಲ್ಲಿ ಕೆಲ ದೋಷಗಳಾಗಿವೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ ಎಂದು ವಿಶೇಷ ಡಿಜಿಪಿ ಎನ್.ಆರ್.ಕೆ. ರೆಡ್ಡಿ ಹೇಳಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ರಾಜಕೀಯ ಗಣ್ಯ ವ್ಯಕ್ತಿಯೊಬ್ಬರ ಹೆಸರೂ ಕೂಡ ಕೇಳಿ ಬಂದಿದೆ.
Alwar lynching victim died of shock due to injuries, says post-mortem report