ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ

ದೇವಸ್, ಜು.23-ಶಾಲೆಗೆ ಚಕ್ಕರ್ ಹಾಕಿ ಮನೆಯತ್ತ ತೆರಳುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯ ಮೇಲೆ ನಾಲ್ಕು ದಿನಗಳ ಕಾಲ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ದೇವಸ್ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.
ಘಟನೆ ವಿವರ : ಜುಲೈ 16ರಂದು ಬೆಳಗ್ಗೆ 8 ಗಂಟೆಗೆ ವಿದ್ಯಾರ್ಥಿನಿ ಎಂದಿನಂತೆ ಮನೆಯಿಂದ ಶಾಲೆಗೆ ಹೊರಟಿದ್ದಳು. ಆದರೆ, ಆಕೆ ಸಂಜೆಯಾದರೂ ಮನೆಗೆ ಹಿಂದಿರುಗದ ಕಾರಣ ಆತಂಕಗೊಂಡ ಪೆÇೀಷಕರು ಮರುದಿನ ನೆವವರ್ ಪೆÇಲೀಸ್ ಠಾಣೆಗೆ ದೂರು ನೀಡಿದರು.
ಅಪ್ರಾಪ್ತೆ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಂಡ ಪೆÇಲೀಸರು ತನಿಖೆ ಮುಂದುವರಿಸಿದರು. ನಾಲ್ಕು ದಿನಗಳ ನಂತರ ಶನಿವಾರ ಬೆಳಗ್ಗೆ ಆಕೆಯ ಮನೆ ಸಮೀಪ ಸ್ಯಾಂಡಲ್‍ಪುರ್ ರಸ್ತೆಯಲ್ಲಿ ಬಾಲಕಿಯನ್ನು ಪೆÇಲೀಸರು ಪತ್ತೆ ಮಾಡಿದರು. ವಿದ್ಯಾರ್ಥಿನಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಜುಲೈ 16ರಂದು ಶಾಲೆಗೆ ಹಾಜರಾಗಿದ್ದ ಆಕೆ ಮಧ್ಯದಲ್ಲಿ ಶಾಲೆಗೆ ಚಕ್ಕರ್ ಹಾಕಿ ಮನೆಯತ್ತ ಹಿಂದುರುಗುತ್ತಿದ್ದಳು. ತನ್ನ ಮನೆ ಸಮೀಪ ಬಸ್ಸಿನಿಂದ ಇಳಿದಾಗ ಅಲ್ಲಿ ಬೈಕ್‍ಗಳಲ್ಲಿದ್ದ ಯುವಕರು ಮನೆವರೆಗೆ ಬಿಡುವುದಾಗಿ ಪುಸಲಾಯಿಸಿ ಇನ್ನೊಂದು ಗ್ರಾಮಕ್ಕೆ ಕರೆದೊಯ್ಡು ಮನೆಯೊಂದರಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು. ಈ ಕೃತ್ಯ ನಾಲ್ಕು ದಿನಗಳ ಕಾಲ ನಡೆಯಿತು. ನಂತರ ಬಾಲಕಿಯನ್ನು ಮನೆ ಬಳಿಯ ರಸ್ತೆಯಲ್ಲಿ ಬಿಟ್ಟು ಪರಾರಿಯಾದರು ಎಂದು ತಿಳಿದಿದೆ.
ಬಾಲಕಿ ನೀಡಿದ ದೂರನ್ನು ಆಧರಿಸಿ ನಾಲ್ವರು ಯುವಕರನ್ನು ಬಂಧಿಸಲಾಗಿದೆ ಎಂದು ನೆವವರ್ ಪೆÇಲೀಸ್ ಠಾಣೆ ಇನ್ಸ್‍ಪೆಕ್ಟರ್ ಸಜ್ಜನ್ ಸಿಂಗ್ ಮುಕ್ತಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ