ಗುಂಡಿನ ದಾಳಿ ಆತಂಕದ ವಾತಾವರಣ ಸೃಷ್ಟಿ

ಟೊರಾಂಟೊ, ಜು.23-ಕೆನಡಾದ ಟೊರಾಂಟೊ ನಗರದಲ್ಲಿ ಬಂದೂಕುದಾರಿಯೊಬ್ಬ ಗುಂಡಿನ ದಾಳಿ ನಡೆಸಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಸಿದ. ನಂತರ ಪೆÇಲೀಸರು ಗನ್‍ಮ್ಯಾನ್‍ನನ್ನು ಗುಂಡಿಟ್ಟು ಕೊಂದರು. ಆತ ನಡೆಸಿದ ಹಿಂಸಾಚಾರದಲ್ಲಿ ಮಹಿಳೆಯೊಬ್ಬಳು ಮೃತಪಟ್ಟು, ಇತರ 16 ಮಂದಿ ಗಾಯಗೊಂಡಿದ್ದಾರೆ. ಕೆನಡಾದ ಅತಿದೊಡ್ಡ ನಗರ ಟೊರಾಂಟೊದ ಉಪನಗರಿ ಗ್ರೀಕ್‍ಟೌನ್‍ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಬಂದೂಕುದಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿ ಹಲವರನ್ನು ಗಾಯಗೊಳಿಸಿದ. ಈ ಘಟನೆಯಿಂದ ಆತಂಕಗೊಂಡ ಜನರು ಚೆಲ್ಲಾಪಿಲ್ಲಿಯಾಗಿ ಓಡಿದರು.
ತಕ್ಷಣ ಕಾರ್ಯಪೃವೃತ್ತರಾದ ಪೆÇಲೀಸರು ಗುಂಡು ಹಾರಿಸಿ ದುಷ್ಕರ್ಮಿ ಗನ್‍ಮ್ಯಾನ್‍ನನ್ನು ಕೊಂದರು.
ಗನ್‍ಮ್ಯಾನ್ ಅಟ್ಟಹಾಸಕ್ಕೆ ಓರ್ವ ಯುವತಿ ಬಲಿಯಾಗಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಶೋಚನೀಯಾಗಿದೆ ಎಂದು ಟೊರಾಂಟೊ ಪೆÇಲೀಸ್ ಮುಖ್ಯಸ್ಥ ಮಾರ್ಕ್ ಸಂಡರ್ಸ್ ಹೇಳಿದ್ದಾರೆ.
ಇದು ಉಗ್ರಗಾಮಿಯ ಕೃತ್ಯವೇ ಎಂಬುದನ್ನು ಸದ್ಯಕ್ಕೆ ತಿಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ