
ಮೈಸೂರು, ಜು.21-ವಿದ್ಯಾರ್ಥಿ ನಿಲಯದಲ್ಲಿ ಯುಪಿಎಸ್ ಹಾಗೂ ಬ್ಯಾಟರಿಯನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಆಲನಹಳ್ಳಿ ಠಾಣೆ ಪೆÇಲೀಸರು ಬಂಧಿಸಿ 10 ಸಾವಿರ ಬೆಲೆಯ ಬ್ಯಾಟರಿಯನ್ನು ವಶಪಡಿಸಿಕೊಂಡಿದ್ದಾರೆ.ಗೌಸಿಯಾನಗರದ ಫಾರಂ ಕಾಲೋನಿ ನಿವಾಸಿ ಇಮ್ರಾನ್ (23) ಬಂಧಿತ ಆರೋಪಿ.
ಸರ್ದಾರ್ ವಲ್ಲಭಬಾಯಿ ಪಟೇಲ್ ನಗರದ ವಿದ್ಯಾರ್ಥಿ ನಿಲಯದಲ್ಲಿ ಜೂ.12 ರಂದು ರಾತ್ರಿ ಬ್ಯಾಟರಿ ಹಾಗೂ ಯುಪಿಎಸ್ ಕಳ್ಳತನವಾಗಿದ್ದ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಯನ್ನು ಆಧರಿಸಿ ಪೆÇಲೀಸರು ತನಿಖೆ ಕೈಗೊಂಡು ನಾಲ್ವರು ಆರೋಪಿಗಳ ಪೈಕಿ ಒಬ್ಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.