ತುಮಕೂರು, ಜು.21- ಕುಖ್ಯಾತ ಮನೆಗಳ್ಳನನ್ನು ಬಂಧಿಸಿರುವ ಕ್ಯಾತಸಂದ್ರ ಪೆÇಲೀಸರು 2.4 ಲಕ್ಷ ನಗದು ಸೇರಿದಂತೆ ಏಳೂವರೆ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಮೂಲದ ಚಂದ್ರು ಅಲಿಯಾಸ್ ಆಟೋ ಚಂದ್ರ (30) ಪೆÇಲೀಸರಿಗೆ ಸಿಕ್ಕಿಬಿದ್ದ ಮನೆಗಳ್ಳ.
ಈತ ರಾತ್ರಿ ವೇಳೆ ಮನೆಗಳ ಹಿಂಬಾಗಿಲು ಮೀಟಿ ಒಳ ಪ್ರವೇಶಿಸಿ ಕೈಗೆ ಸಿಕ್ಕ ಚಿನ್ನ ಮತ್ತಿತರ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ. ಕ್ಯಾತಸಂದ್ರ ಪೆÇಲೀಸ್ ಠಾಣೆ ವ್ಯಾಪ್ತಿಯ ಬಸವೇಶ್ವರ ಬಡಾವಣೆ ಮತ್ತು ಸಂಜಯನಗರದಲ್ಲಿ ಮೂರು ಮನೆಗಳ್ಳತನ ಮಾಡಿದ್ದ. ಬಂಧಿತನಿಂದ 2.40 ಲಕ್ಷ ನಗದು ಹಾಗೂ 5.10 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಚಂದ್ರನನ್ನು ಪೆÇಲೀಸರು ವಿಚಾರಣೆಗೊಳಪಡಿಸಿದಾಗ ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ, ಮಡಿವಾಳ ಠಾಣೆಗಳಲ್ಲಿ ಮನೆಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಚಂದ್ರು ಇದುವರೆಗೂ 12ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ತುಮಕೂರು ನಗರ ಪೆÇಲೀಸ್ ಉಪಾಧೀಕ್ಷಕ ಕೆ.ಎಸ್.ನಾಗರಾಜ್ ಮಾರ್ಗದರ್ಶನದಲ್ಲಿ ಸಿಪಿಐ ರಾಮಕೃಷ್ಣಯ್ಯ, ಡಿಸಿಬಿ ಇನ್ಸ್ಪೆಕ್ಟರ್ ಕೆ.ಆರ್.ರಾಮಚಂದ್ರ ನೇತೃತ್ವದಲ್ಲಿ ಕ್ಯಾತಸಂದ್ರ ಠಾಣೆ ಪಿಎಸ್ಐ ಡಿ.ಎಲ್.ರಾಜು ನೇತೃತ್ವದ ಪೆÇಲೀಸರ ತಂಡ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.