ರಾಮೇಶ್ವರಂ, ಜು.21-ದ್ವೀಪ ರಾಷ್ಟ್ರ ಶ್ರೀಲಂಕಾಗೆ ಕಳ್ಳ ಸಾಗಣೆಯಾಗುತ್ತಿದ್ದ 80 ಲಕ್ಷ ರೂ. ಮೌಲ್ಯದ 750 ಕೆಜಿ ಸಂಸ್ಕರಿತ ಸಮುದ್ರ ಸೌತೆ(ಸೀ ಕುಕುಂಬರ್)ಗಳನ್ನು ತಮಿಳುನಾಡಿನ ಮಂಡಪಂ ಕರಾವಳಿ ಪ್ರದೇಶದಲ್ಲಿ ಸಾಗರ ರಕ್ಷಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಸಮುದ್ರದಲ್ಲಿ ಲಂಗರು ಹಾಕಿದ ನಾಡ ದೋಣಿಯೊಂದರ ಗೋಣಿ ಚೀಲಗಳಲ್ಲಿ ಕಡಲ ಸೌತೆಗಳನ್ನು ಮರೈನ್ ಪೆÇಲೀಸರು ಪತ್ತೆ ಮಾಡಿ ಮೂವರನ್ನು ಬಂಧಿಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮುದ್ರ ಸೌತೆಯನ್ನು ಅವನತಿಯ ಅಂಚಿನಲ್ಲಿರುವ ಜಲಚರ ಎಂದು ವರ್ಗೀಕರಿಸಲಾಗಿದೆ ಹಾಗೂ ಇವುಗಳ ಕೊಯ್ಲು ಮತ್ತು ಕಳ್ಳಸಾಗಣೆಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ನಿಷೇಧಿಸಲಾಗಿದೆ. ಏಷ್ಯಾದ ಕೆಲವು ದೇಶಗಳಲ್ಲಿ ಈ ಸಾಗರ ಜೀವಿಗಳಿಗೆ ಅಪಾರ ಬೇಡಿಕೆ ಇದೆ.