ಅಮರನಾಥ ಯಾತ್ರೆ: ಶೆಲ್ ಪತ್ತೆ

ಶ್ರೀನಗರ, ಜು.21-ಅಮರನಾಥ ಯಾತ್ರೆ ಮಾರ್ಗದಲ್ಲಿ ಸ್ಫೋಟಗೊಳ್ಳದ ಶೆಲ್ ಒಂದು ಪತ್ತೆಯಾಗಿ ಕೆಲಕಾಲ ಭಾರೀ ಆತಂಕಕ್ಕೆ ಕಾರಣವಾಗಿತ್ತು. ಅಮರನಾಥ ಯಾತ್ರಿಕರ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಯೋಧರು ನಂತರ ಈ ಸ್ಫೋಟಕವನ್ನು ಸುರಕ್ಷಿತ ಸ್ಥಳದಲ್ಲಿ ಸ್ಫೋಟಿಸಿ ಸಂಭವಿಸಬಹುದಾಗಿದ್ದ ಆನಾಹುತ ತಪ್ಪಿಸಿದರು.
ಜಮ್ಮು ಮತ್ತು ಕಾಶ್ಮೀರದ ಗಗನಗೀರ್ ಬಳಿ ಹಂಗ್ ಪಾರ್ಕ್‍ನಿಂದ 200 ಮೀಟರ್ ದೂರದಲ್ಲಿ ನಿನ್ನೆ ಸಂಜೆ 120 ಎಂ.ಎಂ. ಸೆಲ್ ಪತ್ತೆಯಾಯಿತು. ಐಟಿಬಿಪಿ ಪೆÇಲೀಸರು ಮತ್ತು ಎಎಸ್‍ಸಿ ತಂಡದ ಯೋಧರು ಅಮರನಾಥ ಯಾತ್ರೆ ಮಾರ್ಗವನ್ನು ಪರಿಶೀಲಿಸುತ್ತಿದ್ದಾಗ ಇದು ಪತ್ತೆಯಾಯಿತು. ಆದರೆ ಇದು ಇನ್ನು ಸ್ಫೋಟಗೊಂಡಿರಲಿಲ್ಲ. ತಕ್ಷಣ ಕಾರ್ಯಪ್ರವೃತ್ತರಾದ ಇಂಡೋ-ಟಿಬೆಟಿಯನ್ ಬಾರ್ಡರ್ ಪೆÇಲೀಸರು ಮರಳು ಚೀಲಗಳನ್ನು ಅದರ ಮೇಲೆ ಹಾಕಿದರು. ನಂತರ ಅದರನ್ನು ದೊಮೈಲ್ ಪ್ರದೇಶದಲ್ಲಿ ಸೇನಾ ಎಂಜಿನಿಯರ್‍ಗಳ ಸಹಾಯದೊಂದಿಗೆ ದೂರ ನಿಯಂತ್ರಣ ಸಾಧನದ ಮೂಲಕ ಸುರಕ್ಷಿತ ಸ್ಥಳದಲ್ಲಿ ಸ್ಫೋಟಿಸಲಾಯಿತು. ಇದರಿಂದ ಯಾತ್ರಾರ್ಥಿಗಳು ಸ್ಫೋಟ ದುರಂತದಿಂದ ಪಾರಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ