ನವದೆಹಲಿ:ಜು-21: ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಅವಿಶ್ವಾಸ ನಿರ್ಣಯದ ವಿರುದ್ಧ ಪ್ರಧಾನಿ ಮೋದಿ ಸರ್ಕಾರ ಗೆಲುವು ಸಾಧಿಸಿದೆ.
ವಿಪಕ್ಷಗಳ ಅವಿಸ್ ಕಾಂಗ್ರೆಸ್ ನೇತೃತ್ವದ ಯುಪಿಎಗೆ ತೀವ್ರ ಮುಖಭಂಗವಾಗಿದ್ದು ವಿಪಕ್ಷಗಳ ಅವಿಶ್ವಾಸ ನಿರ್ಣಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭರ್ಜರಿ ಗೆಲುವು ಸಾಧಿಸಿದೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಸೋಲು ಕಂಡಿದೆ. ಮ್ಯಾಜಿಕ್ ನಂಬರ್ ಗೆ 248 ಮತಗಳು ಬೇಕಿದ್ದು ನರೇಂದ್ರ ಮೋದಿ ಸರ್ಕಾರಕ್ಕೆ 325 ಮತಗಳು ಬಂದಿವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಅವಿಶ್ವಾಸ ನಿರ್ಣಯ ಪರವಾಗಿ 126 ಮತಗಳನ್ನು ಪಡೆದಿದೆ.
451 ಸಂಸದರು ಲೋಕಸಭೆಯಲ್ಲಿ ಹಾಜರಿದ್ದು ಬಟನ್ ಒತ್ತುವ ಮೂಲಕ ಮತ ಚಲಾಯಿಸಿದರು. ಇನ್ನು ಮೋದಿ ಸರ್ಕಾರದ ಪರವಾಗಿ 325 ಮತಗಳು ಬಂದಿದ್ದು 199 ಮತಗಳ ಅಂತರದಿಂದ ಗೆಲುವು ಸಾಧಿಸಿದೆ.
lokasabhe,PM MODI Win,no-confidence motion comfortably with 325 votes