ತುಮಕೂರು,ಜು.20-ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಮನೆಗಳನ್ನು ದೋಚುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ತುಮಕೂರು ಪೆÇಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ವೇಲೂರಿನ ಗಣೇಶ(42), ಭದ್ರವತಿ ತಾಲ್ಲೂಕಿನ ದೊಡ್ಡೇರಿ ಗ್ರಾಮದ ರಾಮಚಂದ್ರ(32), ಮಹಾರಾಷ್ಟ್ರ ಕೇಶವನಗರದ ಫರಿಮುಲ್ಲ ಇಂತಿಯಾಜ್(24) ಬಂಧಿತ ಅಂತಾರಾಜ್ಯ ಕಳ್ಳರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ದಿವ್ಯಗೋಪಿನಾಥ್ ಅಂತಾರಾಜ್ಯ ಕಳ್ಳರ ಬಗ್ಗೆ ಮಾಹಿತಿ ನೀಡಿದರು. ಈ ಮೂವರು ತುಮಕೂರು, ಮೈಸೂರು, ಬೆಂಗಳೂರು, ಚೆನ್ನೈ ಮತ್ತು ಪೂನಾ ಇತರೆಡೆ ಒಂಟಿ ಮಹಿಳೆಯರನ್ನು ಟಾರ್ಗೇಟ್ ಮಾಡಿಕೊಂಡು ಉನ್ನತ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಬಂದು, ನಾವು ಸ್ಮಾರ್ಟ್ ಸಿಟಿ ಅಧಿಕಾರಿಗಳು ನಿಮ್ಮ ಮನೆಯಲ್ಲಿ ಯುಜಿಡಿ ನೀರಿನ ಸಂಪರ್ಕ ಪರಿಶೀಲಿಸಬೇಕು ತೋರಿಸಿ ಎಂದು ಮನೆಯಲ್ಲಿರುವ ಮಹಿಳೆಯರನ್ನು ಟೆರಸ್ ಮೇಲೆ ಕರೆದುಕೊಂಡು ಹೋಗುತ್ತಿದ್ದರು.
ಇತ್ತ ಈ ಗ್ಯಾಂಗ್ನ ಇತರರು ಮನೆಗೆ ನುಗ್ಗಿ ಚಿನ್ನಾಭರಣ, ಹಣ ದೋಚಿ ಪರಾರಿಯಾಗುತ್ತಿದ್ದರು. ಕಳೆದ ತಿಂಗಳು ಸಹ ನಗರದಲ್ಲಿ ಈ ರೀತಿ ಕಳ್ಳತನವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೆÇಲೀಸರು ಡಿವೈಎಸ್ಪಿ ನಾಗರಾಜ್, ಸಿಪಿಐ ರಾಧಾಕೃಷ್ಣ, ರಾಮಕೃಷ್ಣಯ್ಯ, ಪಿಎಸ್ಐ ಲಕ್ಷ್ಮಯ್ಯ ಹಾಗೂ ಸಿಬ್ಬಂದಿಗಳಾದ ಸೈಮನ್, ಮಂಜುನಾಥ್, ಮಹೇಶ್, ಮೋಹನ್ಕುಮಾರ್, ಶಾಂತರಾಜ್, ಪ್ರಸನ್ನ ಇವರನ್ನೊಳಗೊಂಡ ವಿಶೇಷ ತಂಡ ಕಳ್ಳರ ಬೆನ್ನೆತ್ತಿದಾಗ ತಮಿಳುನಾಡಿನ ಆಂಬೂರಿನಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದರು.
ನಂತರ ಪುಣೆಯ ಎಸ್ಟೇಟ್ವೊಂದರಲ್ಲಿ ಅಡಗಿ ಕುಳಿತಿರುವ ಬಗ್ಗೆ ನಿಖರ ಮಾಹಿತಿ ಕಲೆ ಹಾಕಿ ದಾಳಿ ಮಾಡಿ ಫರಿಮುಲ್ಲನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು. ಕೂಡಲೇ ಮೂವರನ್ನು ತೀವ್ರ ವಿಚಾರಣೆಗೊಳಪಡಿಸಿ 500 ಗ್ರಾಂ ಚಿನ್ನ, 2.52 ಲಕ್ಷ ನಗದು , ಒಂದು ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಇವರ ವಿರುದ್ದ ಕ್ಯಾತಸಂದ್ರ ಠಾಣೆಯಲ್ಲಿ ಒಂದು , ಎನ್ಇಪಿಎಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಈ ಖತರ್ನಾಕ್ ಕಳ್ಳರು ಎಲ್ಲಿಯೂ ಸಹ ಕಾರುಗಳನ್ನು ಬಳಸದೆ ದ್ವಿಚಕ್ರ ವಾಹನದಲ್ಲೇ ಕಾರ್ಯಾಚರಣೆ ನಡೆಸಿ ನಂತರ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬೈಕ್ನಲ್ಲಿ ತೆರಳಿ, ಬೈಕ್ಗಳನ್ನು ಅಲ್ಲಿಯೇ ಬಿಟ್ಟು ಚೆನ್ನೈಗೆ ವಿಮಾನದಲ್ಲಿ ಹಾರುತ್ತಿದ್ದರು.
ಶ್ಲಾಘನೆ: ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ವಿಶೇಷ ತಂಡಕ್ಕೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಂಡಕ್ಕೆ ಬಹುಮಾನ ಕೂಡ ಘೋಷಿಸಿದ್ದಾರೆ. ಗೋಷ್ಠಿಯಲ್ಲಿ ಎಎಸ್ಪಿ ಶೋಭಾರಾಣಿ, ಡಿವೈಎಸ್ಪಿ ನಾಗರಾಜ್, ರಾಧಾಕೃಷ್ಣ, ರಾಮಕೃಷ್ಣಯ್ಯ ಮತ್ತಿತರರು ಇದ್ದರು.