ವಿರಾಟ್ ಕೊಹ್ಲಿಯನ್ನ ಔಟ್ ಮಾಡಲು ನಿವೃತ್ತ ಕ್ರಿಕೆಟಿಗನ ನೇಮಕ ಮಾಡಲು ಇಸಿಬಿ ಪ್ಲಾನ್

ಲಂಡನ್: ಮುಂಬರುವ ಟೀಂ ಇಂಡಿಯಾದ ವಿರುದ್ದದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಟೀಂ ಇಂಡಿಯಾ ನಾಯ ವಿರಾಟ್ ಕೊಹ್ಲಿಯನ್ನ ಔಟ್ ಮಾಡೋಕೆ ನಿವೃತ್ತ ಕ್ರಿಕೆಟಿಗನೊಬ್ಬನನ್ನ ತಂಡಕ್ಕೆ ಆಯ್ಕೆ ಮಾಡಲು ಚಿಂತೆ ನಡೆಸಿದೆ. ಇಂಗ್ಲೆಂಡ್ ಕ್ರಿಕೆಟ್ ಆಯ್ಕೆ ಮಂಡಳಿಯ ಮುಖ್ಯಸ್ಥ ಇ.ಡಿ.ಸ್ಮಿತ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ ಔಟ್ ಮಾಡಲು ಲೆಗ್ ಸ್ಪಿನ್ನರ್ ಆದಿಲ್ ರಶೀದ್‍ನನ್ನ ತಂಡಕ್ಕೆ ಸೇರಿಸಲು ಚಿಂತನೆ ನಡೆಸಿದ್ದಾರೆ. ಆದಿಲ್ ರಶೀದ್ ಟೆಸ್ಟ್‍ನಿಂದ ನಿವೃತ್ತಿಯಾಗಿದ್ದಾರೆ.
ಮೊನ್ನೆ ಟೀಂ ಇಂಡಿಯಾ ವಿರುದ್ಧ ಮುಗಿದ ಏಕದಿನ ಸರಣಿಯಲ್ಲಿ ರಶೀದ್ ಖಾನ್ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರಶೀದ್ ಖಾನ್ ಈ ಹಿಂದೆ ಟೆಸ್ಟ್ ಪಂದ್ಯಗಳಲ್ಲಿ 10 ಪಂದ್ಯಗಳನ್ನಾಡಿ 38 ವಿಕೆಟ್ ಪಡೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ