ಭುವಿಗೆ ಎನ್‍ಸಿಎ ಅಕಾಡೆಮಿಯಲ್ಲಿ ಕಠಿಣ ಫಿಟ್ನೆಸ್ ಪರೀಕ್ಷೆ

ಬೆಂಗಳೂರು: ಟೀಂ ಇಂಡಿಯಾದ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಬೆಂಗಳೂರಿನ ಎನ್‍ಸಿಎ ಅಕಾಡೆಮಿಯಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಪಡಲಿದ್ದಾರೆ. ಭುವನೇಶ್ವರ್ ಕುಮಾರ್ ಇಂಜುರಿ ಮತ್ತು ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದುದ್ದರಿಂದ ಆ. 1ರಿಂದ ಆಂಗ್ಲರ ವಿರುದ್ಧ ಆರಂಭವಾಗುವ ಟೆಸ್ಟ್ ಸರಣಿಗೆ ಆಯ್ಕೆಯಾಗಿಲ್ಲ. ವಿರುದ್ದ ಟಿ20 ಮತ್ತು ಏಕದಿನ ಸರಣಿಯಲ್ಲಿ ವಿಕೆಟ್‍ಗಳನ್ ಪಡೆಯದೇ ನಿರಾಸೆಗೊಳಿಸಿದ್ರು. ಇದೀಗ ಮಂಡಳಿಯ ವೈದ್ಯಕೀಯ ತಂಡದ ಉಪಸ್ಥಿತಿಯಲ್ಲಿ ಭುವಿ ಫಿಟ್ನೆಸ್ ಪರೀಕ್ಷೆಗೆ ಒಳಪಡಲಿದ್ದು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ್ರೆ ಭುವಿ ಆಂಗ್ಲರ ವಿರುದ್ಧ ಟೆಸ್ಟ್ ಸರಣಿ ಆಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ