ಮುಂಬೈ: ಆಂಗ್ಲರ ವಿರುದ್ಧ ಮೂರನೆ ಏಕದಿನ ಪಂದ್ಯದ ನಂತರ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅಂಪೈರ್ನಿಂದ ಚೆಂಡು ತೆಗೆದುಕೊಂಡಿದ್ದು ತಂಡದ ಬೌಲಿಂಗ್ ಕೋಚ್ಗೆ ತೋರಿಸಲು ಎಂದು ಟೀಂ ಇಂಡಿಯಾದ ತರಬೇತುದಾರ ರವಿ ಶಾಸ್ತ್ರಿ ಹೇಳಿದ್ದಾರೆ.
ಮೊನ್ನೆ ಬುಧವಾರ ಧೋನಿ ಪಂದ್ಯ ಮುಗಿದ ಬಳಿಕ ಅಂಪೈರ್ನಿಂದ ಚೆಂಡು ತೆಗೆದುಕೊಂಡ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬಗ್ಗೆ ಸಾಕಷ್ಟು ಪರ ವಿರೋಧದ ಚರ್ಚೆಗಳು ನಡೆದಿದ್ದವು. ಧೋನಿ ಅಂಪೈರ್ನಿಂದ ಯಾಕೆ ಚೆಂಡು ತೆಗೆದುಕೊಂಡ್ರು. ಇದು ಕೊನೆಯ ಎನ್ನುವ ಕಾರಣಕ್ಕೆ ಸ್ಮರಣಿಯವಾಗಿರಲೆಂದು ಚೆಂಡನ್ನ ಪಡೆದ್ರಾ ? ಧೋನಿ ಕ್ರಿಕೆಟ್ಗೆ ಗುಡ್ ಬೈ ಹೇಳ್ತಾರಾ ಎಂದೆ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿತ್ತು. ಇದಕ್ಕೆ ಇದೀಗ ತಂಡದ ಕೋಚ್ ರವಿ ಶಾಸ್ತ್ರಿ ಸ್ಪಷ್ಟನೆ ನೀಡಿದ್ದಾರೆ. ಎಂ.ಎಸ್.ಧೋನಿ ಅವರಿಗೆ ತಂಡದ ಕೋಚ್ ರವಿ ಶಾಸ್ತ್ರಿ ಅವರಿಗೆ ಚೆಂಡನ್ನ ತೋರಿಸಬೇಕಿತ್ತು. ಆಡುವಾಗ ಕಂಡೀಷನ್ಗೆ ಚೆಂಡು ಹೇಗೆ ಬದಲಾಗುತ್ತೆ ಅನ್ನೋದಕ್ಕೆ ತೋರಿಸೊದಕ್ಕಾಗಿ ಅಂಪೈರ್ನಿಂದ ಚೆಂಡನ್ನ ತೆಗೆದುಕೊಂಡ್ರು.