ನವದೆಹಲಿ, ಜು.18- ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ಪಾಕಿಸ್ತಾನ ಮೂಲದ ಜೈಷೆ-ಎ-ಮುಹಮ್ಮದ್ ಉಗ್ರ ಸಂಘಟನೆಯ ಸಂಭಾವ್ಯ ದಾಳಿಯ ಬಗ್ಗೆ ಗುಪ್ತಚರ ಇಲಾಖೆಗಳು ಮುನ್ನಚ್ಚರಿಕೆ ನೀಡಿದ್ದು, ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.
ದೆಹಲಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ವಿಮಾನ ನಿಲ್ದಾಣ, ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೆÇಲೀಸರನ್ನು ನಿಯೋಜಿಸಲಾಗಿದೆ.
ನಗ್ರೊಟ್ ಸೇನಾ ಶಿಬಿರದ ಮೇಲೆ 2016ರಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿ ಜೈಷೆ ಎ ಮುಹಮ್ಮದ್ ಉಗ್ರರಾದ ಸಯ್ಯದ್ ಮುನೀರುಲ್ ಹಸನ್ ಖಾದ್ರಿ, ಆಶಿಕ್ ಬಾಬ ಮತ್ತು ತಾರಿಕ್ ಅಹ್ಮದ್‍ದಾರ್ ಎಂಬವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಉಗ್ರರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ಲಂಬರ್ ಮತ್ತಿತರ ಕೆಲಸಗಾರರ ರೂಪದಲ್ಲಿ ಜೈಷೆ ಎ ಮುಹಮ್ಮದ್ ಉಗ್ರ ಸಂಘಟನೆ ತನ್ನ ತರಬೇತಿ ಹೊಂದಿದ ಕಾರ್ಯಕರ್ತರನ್ನು ದೇಶದೊಳಗೆ ಕಳುಹಿಸಿದೆ ಎಂದು ವಿಚಾರಣೆಯ ವೇಳೆ ಬಂಧಿತರು ಬಾಯಿ ಬಿಟ್ಟಿದ್ದಾರೆ.
ಉಗ್ರ ಬುರ್ಹಾನ್ ವಾನಿ ಮತ್ತು ಇತರ ಕಮಾಂಡರ್‍ಗಳ ಹತ್ಯೆಗೆ ಪ್ರತೀಕಾರವಾಗಿ ದೆಹಲಿಯ ಜನನಿಬಿಡ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಸಲು ಉದ್ದೇಶಿಸಲಾಗಿದೆ ಎಂದು ಉಗ್ರರು ಬಾಯ್ಬಿಟ್ಟಿದ್ದಾರೆ.
ತಾನು ಮತ್ತು ಕಾಶ್ಮೀರ ಕಣಿವೆಯಲ್ಲಿ ಕಾರ್ಯಾಚರಿಸುತ್ತಿರುವ ಇತರ ಜಿಎಎಂ ಕಾರ್ಯಕರ್ತರು ಪಾಕಿಸ್ತಾನದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸಾಂಬಾ ವಲಯದ ಮೂಲಕ ಮೂವರು ಒಳನುಸುಳಿದ್ದಾರೆ ಎಂದು ವಿಚಾರಣೆಯ ವೇಳೆ ಉಗ್ರ ಖಾದ್ರಿ ಹೇಳಿದ್ದಾನೆ.
ಗುಪ್ತಚರ ಇಲಾಖೆಯ ಈ ಮಾಹಿತಿಯ ಹಿನ್ನೆಲೆಯಲ್ಲಿ ದೆಹಲಿ ಪೆÇಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಹಿರಿಯ ಪೆÇಲೀಸ್ ಅಧಿಕಾರಿಗಳ ಸಭೆ ನಡೆಸಿ ಸಂಭಾವ್ಯ ದಾಳಿಯನ್ನು ಮಟ್ಟಹಾಕುವ ಕುರಿತು ಚರ್ಚಿಸಿದ್ದಾರೆ. ಕೆಂಪುಕೋಟೆಗೆ ಸಂಪರ್ಕ ಹೊಂದಿರುವ ಒಳಚರಂಡಿ ನೀರು ಹರಿದುಹೋಗುವ ಕಾಲುವೆ, ಮ್ಯಾನ್‍ಹೋಲ್‍ಗಳ ಮೇಲೆಯೂ ಪೆÇಲೀಸರು ವಿಶೇಷ ನಿಗಾ ವಹಿಸಿದ್ದಾರೆ.