ನವದೆಹಲಿ:ಜು-೧೯: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್ ಇ ಮೊಹಮದ್, ಭಾರತೀಯ ಸೇನೆಯ ವಿನಾಶಕಾರಿ ಸಮರನೌಕೆಳನ್ನು ಧ್ವಂಸ ಮಾಡಲು ಸಂಚು ರೂಪಿಸಿದ್ದು, ಅದಕ್ಕಾಗಿ ಉಗ್ರರಿಗೆ ಸಮುದ್ರದಾಳದಲ್ಲಿ ತರಬೇತಿ ನೀಡುತ್ತಿವೆ ಎಂದು ತಿಳಿದುಬಂದಿದೆ.
ಜೈಶ್ ಇ ಉಗ್ರ ಸಂಘಟನೆ ಪಾಕಿಸ್ತಾನದ ವ್ಯಾಪ್ತಿಗೆ ಬರುವ ಮತ್ತು ಪಾಕಿಸ್ತಾನ ನೌಕಾಪಡೆಯ ಸಮುದ್ರವ್ಯಾಪ್ತಿಯ ಬಹವಲ್ಪುರ ಸಮುದ್ರ ಪ್ರದೇಶದಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.
ಭಾರತೀಯ ಸೇನೆಯ ಅತ್ಯಂತ ಬಲಶಾಲಿ ಮತ್ತು ವಿನಾಶಕಾರಿ ಸಮರನೌಕೆಗಳನ್ನು ಧ್ವಂಸ ಮಾಡಲು ಉಗ್ರರಿಗೆ ತರಬೇತಿ ನೀಡಲಾಗುತ್ತಿದ್ದು, ಸಮುದ್ರದ ಅತ್ಯಂತ ಆಳಕ್ಕೆ ಧುಮುಕಿ ಅಲ್ಲಿ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವ ಕುರಿತು ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ.
ಭಾರತದ ಪರಮಾಣ ಜಲಾಂತರ್ಗಾಮಿ ನೌಕೆಗಳು ಮತ್ತು ಯುದ್ಧ ವಿಮಾನಗಳನ್ನು ಸಾಗಿಸುವ ನೌಕೆಗಳು ಮತ್ತು ಸಮರ ನೌಕೆಗಳು ಉಗ್ರರ ಟಾರ್ಗೆಟ್ ಆಗಿದ್ದು, ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾಟ್ ಉಗ್ರರ ಪಟ್ಟಿಯಲ್ಲಿದೆ. ಇದಲ್ಲದೆ ವಿಶಾಖಪಟ್ಟಣದಲ್ಲಿ ಲಂಗರು ಹಾಕಿರುವ ಐಎನ್ಎಸ್ ಚಕ್ರ ಮೇಲೂ ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
Jaish-e-Mohammad,Terrorists,Trained to Attack Indian Navy Base