ನೂತನ ದಾಖಲೆ ಬರೆದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ನವದೆಹಲಿ:ಜು-19: ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ನಿನ್ನೆಯಿಂದ ಆರಂಭವಾಗಿರುವ ಸಂಸತ್ ಮುಂಗಾರು ಅಧಿವೇಶನದಲ್ಲಿ ವೆಂಕಯ್ಯ ನಾಯ್ಡು ಅವರು 10 ಭಾಷೇಗಳಲ್ಲಿ ಮಾತನಾಡುವ ಮೂಲಕ ದಾಖಲೆ ಬರೆದರು.

ರಾಜ್ಯಸಭೆ ಕಲಾಪದಲ್ಲಿ ವೆಂಕಯ್ಯ ನಾಯ್ಡು ಅವರು, ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದ ಘೋಷಣೆ ಮಾಡುವಾಗ ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾತನಾಡಿದ್ದು, ಇದು ಹೊಸ ದಾಖಲೆಯಾಗಿ ಮಾರ್ಪಟ್ಟಿದೆ.
ಇದೇ ವೇಳೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ರಾಜ್ಯಸಭೆ ಕಲಾಪದಲ್ಲಿ 22 ಭಾಷೆಗಳಲ್ಲಿ ಮಾತನಾಡಬಹುದು ಎಂದು ಪ್ರಕಟಿಸಿದ್ದಾರೆ. ಆದರೆ ಸದಸ್ಯರು ಮಾತನಾಡುವಾಗ ಸಚಿವಾಲಯದ ಗಮನಕ್ಕೆ ತರಬೇಕಾಗುತ್ತದೆ ಎಂದೂ ನಾಯ್ಡು ಮಾಹಿತಿ ನೀಡಿದರು.

ರಾಜ್ಯಸಭೆಯಲ್ಲಿ ಈ ಮೊದಲು ಅಸ್ಸಾಮೀ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು , ತೆಲುಗು , ಉರ್ದು ಸೇರಿದಂತೆ 17 ಭಾಷೆಗಳಲ್ಲಿ ಮಾತನಾಡುವ ಅವಕಾಶ ಇತ್ತು. ಇದೀಗ ಹೆಚ್ಚುವರಿಯಾಗಿ ದೋಗ್ರಿ, ಕಾಶ್ಮೀರಿ, ಕೊಂಕಣಿ, ಸಾಂಥಾಲಿ ಮತ್ತು ಸಿಂಧಿ ಭಾಷೆಗಳ ಸೇರ್ಪಡೆಯಾಗಿವೆ.
Monsoon Session of Parliament,Venkaiah Naidu,speaks in 10 languages in Rajya Sabha

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ