ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪ್ರಜ್ಞಾಹೀನರಾಗಿದ್ದ ವ್ಯಕ್ತಿ ಮೃತಪಟ್ಟಿದ್ದು, ಇವರ ಹೆಸರು, ವಿಳಾಸ, ವಾರಸುದಾರರು ಪತ್ತೆಯಾಗಿಲ್ಲ

 

ಬೆಂಗಳೂರು, ಜು.17- ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪ್ರಜ್ಞಾಹೀನರಾಗಿದ್ದ ವ್ಯಕ್ತಿ ಮೃತಪಟ್ಟಿದ್ದು, ಇವರ ಹೆಸರು, ವಿಳಾಸ, ವಾರಸುದಾರರು ಪತ್ತೆಯಾಗಿಲ್ಲ.
5.5 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿರುವ ಸುಮಾರು 55 ವರ್ಷದ ಈ ವ್ಯಕ್ತಿ ರೈಲ್ವೆ ನಿಲ್ದಾಣದಲ್ಲಿ ಪ್ರಜ್ಞಾಹೀನರಾಗಿ ಮಲಗಿದ್ದಾಗ ಇವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಈ ವ್ಯಕ್ತಿ ಎದೆ ಮೇಲೆ ಚಂದ್ರ ಎಂಬ ಅಚ್ಚೆ ಇದೆ. ಅಲ್ಲದೆ, ಮೊಣಕೈ ಮೇಲೆ ಸ್ಟೆಲ್ಲಾ ಎಂಬ ಅಚ್ಚೆಯಿದೆ. ಈ ವ್ಯಕ್ತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿಡಲಾಗಿದ್ದು, ವಾರಸುದಾರರು ಕೂಡಲೇ ಯಶವಂತಪುರ ರೈಲ್ವೆ ಪೆÇಲೀಸರನ್ನು ಸಂಪರ್ಕಿಸಬಹುದಾಗಿದೆ.
ಗೃಹಿಣಿ ವಾರಸುದಾರರ ಪತ್ತೆಗೆ ಸಹಕರಿಸಿ:
ಮೂರು ದಿನಗಳ ಹಿಂದೆ ಸುಮಾರು 25 ವರ್ಷದ ಗೃಹಿಣಿ ರೈಲಿಗೆ ಸಿಕ್ಕಿ ಮೃತಪಟ್ಟಿದ್ದು, ವಾರಸುದಾರರು ಇದುವರೆಗೂ ಪತ್ತೆಯಾಗಿಲ್ಲ. ಯಲಹಂಕ ರೈಲ್ವೆ ವ್ಯಾಪ್ತಿಯ ಜಿಕೆವಿಕೆ ಬಳಿಯ ಅರಳಾಳಸಂದ್ರ ರೈಲ್ವೆ ಬ್ರಿಡ್ಜ್ ಕೆಳಗೆ ರೈಲಿಗೆ ಸಿಕ್ಕಿ ಮೃತಪಟ್ಟಿದ್ದು, ಶವವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿಡಲಾಗಿದೆ.
ಈ ಯುವತಿ ಕಾಲುಂಗುರ, ತಾಳಿ ಧರಿಸಿದ್ದು, ಬಲಗೈ ಮೇಲೆ ಯುಎಸ್‍ಕೆ ಎಂಬ ಅಚ್ಚೆ ಇದೆ. ಕೆಂಪು ಬಣ್ಣದ ಟಾಪ್, ಹಳದಿ ಬಣ್ಣದ ಪ್ಯಾಂಟ್, ವೇಲ್ ಹೊಂದಿರುವ ಚೂಡಿದಾರ್ ಧರಿಸಿದ್ದು, ಜಾಕೆಟ್ ಸಹ ಇದೆ.
ಶವವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆ ಶವಾಗಾರದಲ್ಲಿಡಲಾಗಿದೆ.
ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‍ವೊಂದನ್ನು ಬಂಧಿಸಿ 80 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನಾಭರಣ, ಬೆಲೆಬಾಳುವ ವಾಚ್‍ಗಳು ಹಾಗೂ ವಿದೇಶಿ ಕರೆನ್ಸಿ ಗಳನ್ನು ವಶ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ