ಟಾನ್ಸಿಲ್ಸ್ಗಳನ್ನು ಕನ್ನಡದಲ್ಲಿ ಗಲಗ್ರಂಥಿಯ ಊತ ಎಂದು ಕರೆಯುತ್ತೇವೆ. ಇವು ಗಂಟಲು ಗ್ರಂಥಿಯ ಹಿಂಭಾಗದಲ್ಲಿರುವ 2 ಗೂಲಾಕಾರ/ಗುಳ್ಳೆಗಳಿರುವ ರೀತಿ ಕಾಣಿಬರುತ್ತವೆ. ಟಾನ್ಸಿಲ್ಸ್ಗಳು, ಶ್ವಾಸನಾಳಗಳಿಗೆ ಸೋಂಕು ಉಂಟು ಮಾಡುವ ರೋಗಾಣುಗಳನ್ನು ತಡೆಯುತ್ತದೆ ಹಾಗು ಸೋಂಕು ಉಂಟುಮಾಡುವ ರೋಗಾಣುಗಳ ವಿರುದ್ದ ಹೋರಾಡುವ ಸತ್ವವನ್ನು ಸಹ ಉತ್ಪಾದಿಸುತ್ತದೆ.
ಟಾನ್ಸಿಲ್ಗಳಿಗೆ ಸೋಂಕು ಉಂಟಾದಾಗ, ಉರಿ, ಊತ, ನೋವಿಂದ ಕೂಡಿದ್ದು, ಮಕ್ಕಳಿಂದ ಹಿಡಿದು ವೃಧ್ದಾರವರೆಗೆ ಎಲ್ಲರನ್ನು ಕಾಡುತ್ತದೆ. ವಿಶೇಷವಾಗಿ ಮಕ್ಕಳಲ್ಲಿ ಮತ್ತು ಯೌವಾನವಸ್ಥೆಯಲ್ಲಿರುವವರಲ್ಲಿ ಹೆಚ್ಚು ಕಂಡುಬರುತ್ತದೆ. ಟಾನ್ಸಿಲ್ ಸೋಂಕು ಬ್ಯಾಕ್ಟೀರಿಯ ಅಥವ ವೈರಸ್ಗಳ ಕಾರಣದಿಂದ ಕಾಣಿಸಿಕೊಳ್ಳುತ್ತದೆ. ಹಾಗು ಮಳೆ ಮತ್ತು ಚಳಿಗಾಲದಲ್ಲಿ ಹೆಚ್ಚು ಕಂಡುಬರುತ್ತದೆ. ಆತಿ ಶೀತವಾದ ಆಹಾರದ ಸೇವನೆ, ಅತಿ ಕಫ ಉಂಟುಮಾಡುವ ಆಹಾರದ ಸೇವನೆಯಿಂದಲೂ ಸಹ ಉಂಟಾಗುತ್ತದೆ.
ಟಾನ್ಸಿಲೈಟಿಸ್ ಲಕ್ಷಣಗಳು-
ಟಾನ್ಸಿಲೈಟಿಸ್ ಕಾಯಿಲೆ ಕಾಣಿಸಿಕೂಂಡವರಲ್ಲಿ ಈ ಕೆಳಗಿನ ಲಕ್ಷಣಗಳಿರುತ್ತದೆ –
- ಟಾನ್ಸಿಲ್ಗಳು ಕೆಂಪಾಗಿರುತ್ತದೆ.
- ಕೆಲವೂಮ್ಮೆ ಟಾನ್ಸಿಲ್ಸಗಳ ಮೇಲೆ 1-4 ಬಿಳಿ ಮಚ್ಚೆಗಳು ಗೂಚರವಾಗಬಹುದು.
- ಗಂಟಲಿನಲ್ಲಿ ನೋವುಂಟಾಗುತ್ತದೆ .
- ನೀರು ,ಆಹಾರ ಸೇವನೆ ಅಲ್ಲದೆ ಉಗುಳು ನುಂಗುವಾಗಲೂ ಸಹ ಅತಿಹೆಚ್ಚು ನೋವು ಕಾಣಿಸಿಕೂಳ್ಳುತ್ತದೆ.
- ವ್ಯಕ್ತಿಯ ಧ್ವನಿಯಲ್ಲಿ ವ್ಯತ್ಯಾಸವಾಗುತ್ತದೆ,
- ಶ್ವಾಸ ನಾಳಗಳಲ್ಲಿ ಸರಾಗವಾಗಿ ಉಸಿರಾಟವಾಡಲು ತೂಂದರೆಕಾಣಿಸಿಕೂಳ್ಳುತ್ತದೆ.
- ತಲೆನೋವು ಉಂಟಾಗುತ್ತದೆ
- ಕಿವಿ ನೋವು ಉಂಟಾಗುತ್ತದೆ
- ದವಡೆ ನೋವು ಉಂಟಾಗುತ್ತದೆ
- ಬಾಯಿಯಲ್ಲಿ ದುವರ್ಾಸನೆ ಇರುತ್ತದೆ
- ಜ್ವರ ಕಾಣಿಸಿಕೂಳ್ಳುತ್ತದೆ.
ಟಾನ್ಸಿಲೈಟಿಸ್ಗೆ ಮನೆ ಮದ್ದು-
- ಹೆಚ್ಚು ಖಾರ, ಲವಣ, ಊಪ್ಪಿನ ಅಂಶವಿರುವ ಆಹಾರ ಸೇವಿಸಬಾರದು.
- ಅತಿ ತಣ್ಣಗಿರುವ ಪಾನೀಯ, ಐಸ್ ಕ್ರೀಮ್ ಸೇವಿಸಬಾರದು .
- ಕರೆದ ತಿನಿಸುಗಳನ್ನು ಸೇವಿಸಬಾರದು.
- 1 ಲೀ ಬಿಸಿನೀರಿಗೆ, 1/4 ಚಮಚ ಉಪ್ಪು ಸೇರಿಸಿ ಬೆಳಗ್ಗೆ ಎದ್ದ ಕೂಡಲೆ ಗಾಗಲಿಂಗ್(ಕವಲ) ಮಾಡುವುದರಿಂದ ಸೋಂಕು
- ಕಡಿಮೆಯಾಗಿ, ನೋವು ಹಾಗು ಊತವು ಸಹ ಕಡಿಮೆಯಾಗುತ್ತದೆ.
- 1/2 ಲೀ ಕಾದಾರಿಸಿರುವ ನೀರಿಗೆ ಜೇನುತುಪ್ಪ 2 ಚಮಚ ಮತ್ತು 2 ಚಮಚ ಹಸಿ ಶುಂಠಿ ರಸ ಬೇರಸಿಸೇವಿಸಬೇಕು.
- ವು, ಊತ ನಿವಾರಣೆಯಾಗುತ್ತದೆ.
- ಕುಡಿಯಲು ಬಿಸಿಯಾಗಿರುವ ನೀರನ್ನೇ ಸೇವಿಸಬೇಕು.
- ಬಿಸಿನೀರಿಗೆ 1/2 ಚಮಚ ಜೇಷ್ಠಿಮಧು ಬೆರಸಿ ಸೇವಿಸಿದರೆ ಉತ್ತಮ.
ಟಾನ್ಸಿಲೈಟಿಸ್ ಪದೇ ಪದೆ ಕಾಡದಂತೆ ಅದನ್ನು ಸಂಪೂರ್ಣವಾಗಿ ನಿವಾರಿಸಲು ಈ ಕೆಳಕಂಡ ಆಸನಗಳ ಹಾಗು ಪ್ರಾಣಾಯಾಮವನ್ನು ಅಭ್ಯಾಸಮಾಡುಬೇಕು.
ಆಸನಗಳು-
- ಸಿಂಹಾಸನ
- ಮತ್ಸ್ಯಾಸನ
- ಸರ್ವಾಂಗಾಸನ
- ತ್ರಿಕೋಣಾಸನ
- ಷಡಂಗಾಸನ
- ಗ್ರೀವಶ್ವಾಸ ಕ್ರಿಯೆಗಳು
ಪ್ರಾಣಾಯಾಮ-
- ನಾಡಿ ಶೋಧನ ಪ್ರಾಣಾಯಾಮ
- ಉಜ್ಜೆಯಿ ಪ್ರಾಣಾಯಾಮ.
- ಉಡಿಯಾನ ಭಂದ
ಲೇಖಕರು
ಡಾ|| ಸಿಂಧು ಪ್ರಶಾಂತ್
ಬಿ.ಎ.ಎಮ್.ಎಸ್, ಎಮ್.ಡಿ(ಆಲ್ಟರ್ ನೇಟಿವ್ ಮೆಡಿಸನ್), ಎಮ್.ಎಸ್ಸಿ(ಯೋಗ)
ದೂರವಾಣಿ- 9743857575
ಡಾ|| ಸಿಂಧು ಅವರು ಗರ್ಭಿಣಿಯರೆಗೆ ಯೋಗದ ಮಹತ್ವ ಹಾಗು ಹೇಗೆ ಯೋಗವನ್ನು ಮಾಡಬೇಕೆಂದು ತರಬೇತಿಯನ್ನು ಸ್ಕೈಪ್ ಮುಕಾ0ತರ ಹಲವಾರು ಸ್ತ್ರೀಯರಿಗೆ ಹೇಳಿಕೂಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಗರ್ಭಿಣಿಯರಿಗಾಗಿ ಯೋಗ ಹಾಗು ಪ್ರಾಣಾಯಾಮವನ್ನು ಕುರಿತು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಡಾ|| ಸಿಂಧು ಪ್ರಶಾಂತ್ ರವರು ಬಹುಮುಖ ಪ್ರತಿಭಾವಂತರು.”ನೃತ್ಯ ಪ್ರಾರ್ಥನ ” ಎಂಬ ಸಂಸ್ಥೆಯ ಸ್ಥಾಪಕಿ ಹಾಗು ಶಕ್ಷಕಿಯಾಗಿ ಹಲವಾರು ಶಿಶ್ಯವೃಂದವನ್ನು ತಯಾರಿಸುತಿರುವ ಹೇಗಳಿಕೇ ಇವರದು.