2.30 ಲಕ್ಷ ದರೋಡೆ

 

ಬೆಂಗಳೂರು, ಜು.14- ಹೋಂಡಾ ಆ್ಯಕ್ಟೀವ್ ಸ್ಕೂಟರ್‍ನ ಡಿಕ್ಕಿ ತೆಗೆದು ಅದರಲ್ಲಿದ್ದ 2.30 ಲಕ್ಷ ರೂ. ದೋಚಿರುವ ಘಟನೆ ಮಹದೇವಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ಬೆಳಗ್ಗೆ 11.40ರಲ್ಲಿ ಮುರುಗೇಶನ್ ಎಂಬುವವರು 2.30 ಲಕ್ಷ ರೂ. ಹಣವಿದ್ದ ಬ್ಯಾಗನ್ನು ತಮ್ಮ ಹೋಂಡಾ ಆ್ಯಕ್ಟೀವಾ ಸ್ಕೂಟರ್‍ನಲ್ಲಿಟ್ಟುಕೊಂಡು ಮಹೇಶ್ವರಿನಗರದಲ್ಲಿನ ದನವ್ ವಿವೇಕ್ ಸಿಸ್ಟಮ್ ಎಂಬ ಕಟ್ಟಡದ ಬಳಿ ಬಂದಿದ್ದಾರೆ.
ಸ್ಕೂಟರ್‍ಅನ್ನು ಈ ಸ್ಥಳದಲ್ಲಿ ಪಾರ್ಕಿಂಗ್ ಮಾಡಿ ಕಟ್ಟಡದ ಒಳಗೆ ಹೋಗಿದ್ದಾಗ ದರೋಡೆಕೋರರು ಸ್ಕೂಟರ್‍ನ ಡಿಕ್ಕಿ ತೆಗೆದು ಅದರಲ್ಲಿದ್ದ ಹಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಕೆಲ ಸಮಯದ ಬಳಿಕ ಮುರುಗೇಶನ್ ಅವರು ಬೈಕ್ ಬಳಿ ಬಂದಾಗ ಡಿಕ್ಕಿ ತೆರೆದುಕೊಂಡಿರುವುದನ್ನು ಗಮನಿಸಿ ನೋಡಿದಾಗ ಅದರಲ್ಲಿದ್ದ ಹಣ ಕಳ್ಳತನವಾಗಿರುವುದು ಗೊತ್ತಾಗಿದೆ.
ಕೆಎಸ್ ಲೇಔಟ್: ಕಾರನ್ನು ಪಾರ್ಕಿಂಗ್ ಮಾಡಿ ಚಾಲಕ ನಿದ್ರೆಗೆ ಜಾರಿದ್ದಾಗ ಕಳ್ಳ ಕಾರಿನ ಬಳಿ ಬಂದು ಡ್ರೈವಿಂಗ್ ಲೈಸೆನ್ಸ್ ಹಾಗೂ 3500ರೂ. ಹಣವನ್ನು ಕಳ್ಳತನ ಮಾಡಿದ್ದಾನೆ.
ಭರತ್ ಎಂಬುವವರು ಇಲಿಯಾಸ್ ನಗರದ ಗಣೇಶ ದೇವಸ್ಥಾನದ ಬಳಿ ಕಾರನ್ನು ಪಾರ್ಕಿಂಗ್ ಮಾಡಿ ಡೋರ್ ತೆಗೆದುಕೊಂಡು ಮಲಗಿದ್ದರು.
ಬೆಳಗಿನ ಜಾವ 4.20ರ ಸಮಯದಲ್ಲಿ ಇದನ್ನು ಗಮನಿಸಿದ ಕಳ್ಳ ಕಾರಿನ ಬಳಿ ಬಂದು ಹಣ ಹಾಗೂ ಚಾಲನಾ ಪರವಾನಗಿ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಮಾರತ್ತಹಳ್ಳಿ: ಹಾಡಹಗಲೇ ಮನೆಯೊಂದರ ಬೀಗ ಒಡೆದು ಒಳನುಗ್ಗಿದ ಚೋರರು 4 ಲ್ಯಾಪ್‍ಟಾಪ್, ಪವರ್ ಬ್ಯಾಂಕ್ ಹಾಗೂ 2 ಸಾವಿರ ಹಣ ಕಳ್ಳತನ ಮಾಡಿರುವ ಘಟನೆ ಮಾರತ್ತಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ಬೆಳಗ್ಗೆ ಕಿರಣ್‍ಕುಮಾರ್ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಸಂಜೆ 5 ಗಂಟೆಗೆ ಮನೆಗೆ ವಾಪಸಾದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಹೆಣ್ಣೂರು: ಮನೆಯೊಂದರ ಬೀಗ ಒಡೆದು 150 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಹೆಣ್ಣೂರು ವ್ಯಾಪ್ತಿಯಲ್ಲಿ ನಡೆದಿದೆ.
ಮುನಿಯಪ್ಪ ಲೇಔಟ್‍ನ 4ನೆ ಕ್ರಾಸ್ ನಿವಾಸಿ ಸಯ್ಯದ್ ಸುಹೇಲ್ ಎಂಬುವವರ ಕುಟುಂಬ 12ರಂದು ಊರಿಗೆ ತೆರಳಿದ್ದಾಗ ಕಳ್ಳರು ಈ ಕೃತ್ಯವೆಸಗಿದ್ದಾರೆ.
ನಿನ್ನೆ ಸಂಜೆ ಸಯ್ಯದ್ ಸುಹೇಲ್ ಕುಟುಂಬ ಮನೆಗೆ ವಾಪಸಾದಾಗಲೇ ಕಳ್ಳತನ ನಡೆದಿರುವುದು ಕಂಡುಬಂದಿದ್ದು, ತಕ್ಷಣ ಪೆÇಲೀಸರಿಗೆ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ