ಬೆಂಗಳೂರು, ಜು.13- ಇತ್ತೀಚೆಗೆ ನಗರದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ರಸ್ತೆಗಳು ಗುಂಡಿಮಯವಾಗಿವೆ, ವಾಹನ ಸವಾರರಿಗೆ ಅತೀವತೊಂದರೆಯಾಗುತ್ತಿದೆ, ಮೊದಲು ರಸ್ತೆ ಸರಿಪಡಿಸಿ ಎಂದು ನಾಗರಿಕರು ಪದೇ ಪದೇ ಒತ್ತಾಯಿಸುತ್ತಿದ್ದರೂ ಬಿಬಿಎಂಪಿ ಈ ಕೆಲಸ ಮಾಡದೇ ಸದ್ದಿಲ್ಲದೆ ಜನರ ಮೇಲೆ ಮತ್ತೆ ಹೊರೆ ಹೊರೆಸಲು ಮುಂದಾಗಿದೆ.
ಸಿಲಿಕಾನ್ ಸಿಟಿಯ ಜನರಿಗೆ ಬಿಬಿಎಂಪಿ ಸದ್ದಿಲ್ಲದೆ ಶಾಖ್ ನೀಡಲು ಮುಂದಾಗಿದೆ. ಇತ್ತೀಚೆಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಸಾರಿಗೆ ಸೆಸ್ ಹಾಕುವ ಸಂಬಂಧ ಬಿಬಿಎಂಪಿ ಜೊತೆ ಚರ್ಚಿಸುವುದಾಗಿ ಹೇಳಿದ್ದರು.
ಕರ್ನಾಟಕ ಪೌರ ನಿಗಮಗಳ ಕೈಪಿಡಿ ಮೂಲಕ ಸಾರಿಗೆ ಸೆಸ್ ವಿಧಿಸುವ ಚಿಂತನೆಯನ್ನು ಬಿಬಿಎಂಪಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಪೌರ ನಿಗಮಗಳ ಕೈಪಿಡಿ 103 ಬಿ ಪ್ರಕಾರ ಸಾರಿಗೆ ಸೆಸ್ ವಿಧಿಸುವ ಅಧಿಕಾರ ಪಾಲಿಕೆಗೆ ಇದೆ. ಹಾಗಾಗಿ ಸಾರಿಗೆ ಸಚಿವರ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ.
ನಗರದಲ್ಲಿ ಬರೋಬ್ಬರಿ 73 ಲಕ್ಷಕ್ಕೂ ಹೆಚ್ಚು ವಾಹನಗಳಿವೆ ವಾರ್ಷಿಕ 500 ರೂ. ಮೀರದಂತೆ ಟ್ರಾನ್ಸ್‍ಪೆÇೀರ್ಟ್ ಸೆಸ್ ಪಡೆಯಬಹುದಾಗಿದೆ. ಬೇರೆ ಬೇರೆ ವಾಹನಗಳಿಗೆ ವಿವಿಧ ರೀತಿಯ ದರ ವಿಧಿಸುವ ಅಧಿಕಾರ ಪಾಲಿಕೆಗೆ ಇದೆ. ಹಾಗಾಗಿ ಸದ್ಯದಲ್ಲೇ ಸಾರಿಗೆ ಸೆಸ್ ಹೊರೆ ನಗರದ ನಾಗರಿಕರಿಗೆ ಬೀಳಬಹುದು.
ನಿನ್ನೆಯಷ್ಟೇ ಮೇಯರ್ ಸಂಪತ್‍ರಾಜ್ ಅವರು ಸರ್ಕಾರದಿಂದ ಸಾರಿಗೆ ಸೆಸ್ ವಿಧಿಸುವ ಕುರಿತು ಪ್ರಸ್ತಾವನೆ ಬಂದಿಲ್ಲ. ಬಂದ ನಂತರ ಕೌನ್ಸಿಲ್‍ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹಾರಿಕೆ ಉತ್ತರ ನೀಡಿದ್ದರು.
ಆದರೆ ಸಾರಿಗೆ ಸೆಸ್ ವಿಧಿಸುವುದಕ್ಕೆ ಬಿಬಿಎಂಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.ಈ ಕುರಿತು ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪ್ರತಿಕ್ರಿಯಿಸಿ, ಒಂದು ವೇಳೆ ಟ್ರಾನ್ಸ್ ಪೆÇೀರ್ಟ್ ಸೆಸ್ ಜಾರಿಗೆ ತಂದದ್ದೇ ಆದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಬಿಎಂಟಿಸಿ ಬಸ್ ಸಂಚಾರದಿಂದಲೇ ನಗರದ ರಸ್ತೆಗಳು ಹಾಳಾಗುತ್ತಿದೆ ಎಂದು ಬಿಬಿಎಂಪಿಯವರು ಹೇಳಿದರೆ ಸಚಿವರು ನಗರದ ಗುಂಡಿಬಿದ್ದ ರಸ್ತೆಗಳಿಂದಾಗಿ ಬಸ್‍ಗಳು ಹಾಲಾಗುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದು ಏನೇ ಇರಲಿ ರಸ್ತೆಗಳು ಗುಂಡಿಬಿದ್ದಿರುವುದಂತೂ ಸತ್ಯ. ವಾಹನ ಸವಾರರಿಗೆ ನರಕಯಾತನೆ ಆಗುತ್ತಿರುವುದೂ ನಿಜ. ಇದರ ಜತೆಗೆ ಸೆಸ್ ಹಾಕಿದರೆ ಅದರ ಇದರ ಭಾರವನ್ನು ನಗರದ ನಾಗರಿಕರು ಹೊರಬೇಕಾಗುವುದೂ ಅಷ್ಟೇ ಸತ್ಯ.