ಕೃಷಿ ಸಲಕರಣೆಗಳ ಕದ್ದ ಕಳ್ಳರ ಬಂಧನ

ಚಿಕ್ಕಮಗಳೂರು, ಜು.13- ತೋಟದ ಮನೆಗಳಿಗೆ ನುಗ್ಗಿ ಮಾಲೀಕರನ್ನು ಕಟ್ಟಿಹಾಕಿ ಕಾಳುಮೆಣಸು, ವಾಹನಗಳು, ಪಂಪ್‍ಸೆಟ್ ಸಲಕರಣೆಗಳನ್ನು ಕಳವು ಮಾಡಿದ್ದ ನಾಲ್ವರು ದರೋಡೆಕೋರರನ್ನು ಪೆÇಲೀಸರು ಬಂಧಿಸಿ 9.84 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮುಗುಳುವಳ್ಳಿ ಕಾರ್‍ಮಕ್ಕಿಕಾಲೋನಿಯ ಹರೀಶ್ (28), ಮೂಡಿಗೆರೆ ತಾಲ್ಲೂಕಿನ ಕುಂಡ್ರಾ ಗ್ರಾಮದ ಸುದೀರ್ ಅಲಿಯಾಸ್ ಪೀರ್(22), ಮುಗ್ರಹಳ್ಳಿಯ ಅವಿನಾಶ್, ಮಾಲಹಳ್ಳಿಯ ಮೊಗಣ್ಣಗೌಡ ಬಂಧಿತ ಆರೋಪಿಗಳು.
ಕಿರಣ್, ಅನಿಲ್, ನಂದಕುಮಾರ್, ಸತೀಶ್ ಮತ್ತು ಡ್ರಾಗನ್ ಅಭಿ ತಲೆ ಮರೆಸಿಕೊಂಡಿದ್ದು, ಇವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೆÇಲೀಸ್ ಅಧೀಕ್ಷಕ ಕೆ.ಅಣ್ಣಮಲೈ ತಿಳಿಸಿದ್ದಾರೆ.
ಚಿಕ್ಕಮಗಳೂರು ಗ್ರಾಮಾಂತರ ವೃತ್ತದ ಮಲ್ಲಂದೂರು ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ರಸ್ತೆ ಬದಿಯ ಕಾಫಿ ತೋಟದ ಮನೆಗಳ ಕಣಗಳಲ್ಲಿ ಒಣ ಹಾಕಿದ್ದ ಕಾಳುಮೆಣಸು ಹಾಗೂ ಆಲ್ದೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿನ ತೋಟದ ಮನೆಗಳಿಗೆ ನುಗ್ಗಿ ಮಾಲೀಕರನ್ನು ಕಟ್ಟಿ ಹಾಕಿ ಆರೋಪಿಗಳು ದರೋಡೆ ಮಾಡಿದ್ದರು.
ಪೆÇಲೀಸ್ ಅಧೀಕ್ಷಕರಾದ ಅಣ್ಣಮಲೈ ಹಾಗೂ ಉಪವಿಭಾಗದ ಪೆÇಲೀಸ್ ಅಧೀಕ್ಷಕರಾದ ಚಂದ್ರಶೇಖರ್ ನಿರ್ದೇಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಮಹಮ್ಮದ್ ಸಲಿಂ ಅಬ್ಬಾಸ್, ಮಲ್ಲಂದೂರು ಠಾಣೆ ಪಿಎಸ್‍ಐ ಪ್ರೇಮನಗೌಡ ಪಾಟೀಲ್, ಆಲ್ದೂರು ಠಾಣೆ ಪಿಎಸ್‍ಐಗಳಾದ ಕೆ.ಟಿ.ರಮೇಶ್ ಮತ್ತು ರಾಘವೇಂದ್ರ ಅವರ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಲ್ಲಂದೂರು ಠಾಣೆ ವ್ಯಾಪ್ತಿಯಲ್ಲಿ ಕಾಳುಮೆಣಸು, ಮೋಟಾರ್‍ಪಂಪ್ ಜೆಟ್, ಒಂದು ಸ್ಪ್ರೇ ಮೋಟಾರ್, ಆಲ್ದೂರು ಠಾಣೆ ವ್ಯಾಪ್ತಿಯಲ್ಲಿ 1200ಕೆಜಿ ಕಾಳುಮೆಣಸು, ಒಂದು ಲ್ಯಾಪ್‍ಟಾಪ್, ಒಂದು ರಾಯಲ್ ಎನ್‍ಫೀಲ್ಡ್ ಬೈಕ್ ಸೇರಿ ಒಟ್ಟಾರೆ 9.84ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಗೆ ಬಹುಮಾನ ಘೋಷಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ