
ಮೈಸೂರು,ಜು.13- ಕಬಿನಿ ಹಾಗೂ ಕೆಆರ್ಎಸ್ನಲ್ಲಿ ನೀರು ತುಂಬಿ ಹರಿಯುತ್ತಿದ್ದು, ರೈತರಿಗೆ ಸಂತಸ ಉಂಟು ಮಾಡಿದೆ. ಕೃಷ್ಣರಾಜ ಜಲಾಶಯ ತುಂಬಲು ಕೇವಲ 4 ಅಡಿ ಮಾತ್ರ ಬಾಕಿ ಇದೆ. ಕೆಆರ್ಎಸ್ನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಇಂದಿನ ಮಟ್ಟ 120.20 ಅಡಿಗಳು ಒಳಹರಿವು 39,737 ಕ್ಯೂಸೆಕ್ ಹೊರಹರಿವು 3,766 ಕ್ಯೂಸೆಕ್ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೆಆರ್ಎಸ್ನಲ್ಲಿ 78.65 ಅಡಿಗಳಷ್ಟು ನೀರು ಇತ್ತು. ಒಳಹರಿವು 1465 ಕ್ಯೂಸೆಕ್ ಹೊರಹರಿವು 2132 ಕ್ಯೂಸೆಕ್ಗಳಾಗಿತ್ತು.
ಆಗಿಯೇ ಕಬಿನಿ ಜಲಾಶಯದಲ್ಲಿ ಇಂದಿನ ರಿನ ಮಟ್ಟ 2,281.82 ಅಡಿಗಳು. ಕಬಿನಿ ಜಲಾಶಯವು ಭರ್ತಿ ಆಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ 45,455 ಕ್ಯೂಸೆಕ್ ನೀರು ಹರಿದುಬರುತ್ತಿದೆ.
ಹೊರಹರಿವು 46,250 ಕ್ಯೂಸೆಕ್ ಕಪಿಲ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಳೆದ ವರ್ಷ ಕಬಿನಿ ಜಲಾಶಯದಲ್ಲಿ 2264 ಅಡಿಗಳಷ್ಟು ನೀರಿತ್ತು. ಒಳಹರಿವು 3067 ನೀರು ಇದÉ ಹೊರಹರಿವು 2000 ಕ್ಯೂಸೆಕ್ ಇತ್ತು.