ಮೊಬೈಲ್ ಕಳ್ಳನ ಬಂಧನ

ಮೈಸೂರು,ಜು.13-ನಗರದ ದೇವರಾಜ ಠಾಣೆ ಪೆÇಲೀಸರು ಮೊಬೈಲ್ ಕಳ್ಳನೊಬ್ಬನನ್ನು ಬಂಧಿಸಿ 11000 ರೂ. ಬೆಲೆ ಬಾಳುವ ಓಪೆÇ ಮೊಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ.
ಭಾರತ್‍ನಗರದ 8ನೇ ಕ್ರಾಸ್ ವಾಸಿ ಸದ್ದಾಂ ಹುಸೇನ್(25) ಬಂಧಿತ ಆರೋಪಿ.
ದೇವರಾಜ ಠಾಣೆ ಪೆÇಲೀಸರು ಜು.11ರಂದು ನಗರದ ಕೆ.ಟಿ.ಸ್ಟ್ರೀಟ್‍ನಲ್ಲಿ ಗಸ್ತಿನಲ್ಲಿದ್ದಾಗ ಆರೋಪಿ ಮೊಬೈಲ್ ಮಾರಾಟ ಮಾಡಲು ಯತ್ನಿಸಿದ್ದನು. ಅನುಮಾನಗೊಂಡ ಪೆÇಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಜು.10ರಂದು ಜೆಎಲ್‍ಬಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಂದ ಮೊಬೈಲ್‍ಕಿತ್ತುಕೊಂಡು ಹೋಗಿದ್ದೆ ಎಂದು ತಿಳಿಸಿದ್ದಾನೆ. ಬಂಧಿತನಿಂದ 11 ಸಾವಿರ ಮೌಲ್ಯದ ಒಪೆÇೀ ಪೆÇೀನ್‍ನನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ