ಮಾಜಿ ಸಿಎಂ ಸಿದ್ದರಾಮಯ್ಯರಿಂದ ಅಕ್ರಮ: ಎಸ್.ಅರ್‌. ಪಾಟೀಲ

ಹುಬ್ಬಳ್ಳಿ:- ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿ ಮಲೈ ಅರಣ್ಯ ಪ್ರದೇಶದಲ್ಲಿ ಖಾಸಗಿ ಗಣಿ ಕಂಪನಿಗಳಿಗೆ ಅಕ್ರಮ ಗಣಿಗಾರಿಕೆ ಮಾಡಲು ಕಾನೂನು ಬಾಹಿರವಾಗಿ ಅವಕಾಶ ಮಾಡಿಕೊಟ್ಟಿದೆ ಅಂತ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ‌‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರ, ಅಕ್ರಮ ಗಣಿಗಾರಿಕೆಯಿಂದ ಅಲ್ಲಿರುವ ಸಾವಿರಾರು ವರ್ಷಗಳ ಇತಿಹಾಸ ಇರುವ ಐತಿಹಾಸಿಕ ಸ್ಮಾರಕವಾದ ಪಾರ್ವತಿ – ಕಾರ್ತಿಕೆಯನ್ ದೇಗುಲವನ್ನು ಬಳ್ಳಾರಿ ಪ್ರಮುಖ ಗಣಿ ಕಂಪನಿಗಳಾದ ಜಿಂದಾಲ್ ಮತ್ತು ಬಾಲ್ಡೋಟಾ ಕಂಪನಿಗಳು ಅಪೋಸನ ಪಡೆಯುತ್ತಿವೆ ಎಂದು‌ ಕಳವಳ. ವ್ಯಕ್ತಪಡಿಸಿರು. ಹೀಗಾಗಿ ಈ ದೇಗುಲವನ್ನು ರಕ್ಷಿಸಲು ಸಿಇಸಿ ಸಮಾಜ ಪರಿವರ್ತನಾ ಸಮುದಾಯ ಒತ್ತಾಯಿಸಿದೆ ಎಂದರು. ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ ಆಗಸ್ಟ್‌ ೧೮, ೨೦೧೭ ರಂದು ಸ್ಮಾರಕಗಳ ಇರುವ ಜಾಗದಲ್ಲಿ ಕೇವಲ ೩೦೦ ಮೀಟರ್ ಅಂತರದಲ್ಲಿ ಗಣಿಗಾರಿಕೆ ನಡೆಸಲು ಕಾಯ್ದೆಗೆ ತಿದ್ದುಪಡಿ ಮಾಡಿದೆ.‌ ಇದು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಹುನ್ನಾರ ಅಡಗಿದೆ. ಹಾಗಿಲ್ಲದಿದ್ದರೆ, ಸುಪ್ರೀಂ ಕೋರ್ಟ್ ತೀರ್ಪು ಮತ್ತು ನಮ್ಮದೇ ರಾಜ್ಯ ಸರ್ಕಾರ ಈ ಹಿಂದೆ ಮಾಡಿದ ಕಾನೂನು ಮುರಿದು ಈ ರೀತಿಯ ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂದು ಹಿರೇಮಠ ಆರೋಪಿಸಿದ್ದಾರೆ. ಜೂನ್ ೧೮, ೧೯೭೮ರಲ್ಲಿ ದೇವರಾಜ್ ಅರಸ್ ಸರ್ಕಾರ ಐತಿಹಾಸಕ ಸ್ಮಾರಕಗಳ ಬಳಿ ಗಣಿಗಾರಿಕೆ ಮಾಡಲು ೨ ಕಿ.ಮೀ ಅಂತರ ಕಾಯ್ದುಕೊಳ್ಳಬೇಕು ಎಂದು ಕಟ್ಟುನಿಟ್ಟಿನ ನಿಯಮ ರೂಪಿಸಿತ್ತು.ಅಲ್ಲದೆ, ಜುಲೈ ೯, ೨೦೧೩ರಂದು ಸುಪ್ರೀಂ ಕೋರ್ಟ್ ಸಹ ಹೊಸಪೇಟೆ ತಾಲೂಕಿನ ಜಂಬುನಾಥೇಶ್ವರ ದೇಗುಲದ ಬಳಿ ಗಣಿಗಾರಿಕೆ ಮಾಡಲು ೧ ಕಿ.ಮೀ. ಅಂತರ ಕಾಯ್ದುಕೊಳ್ಳಬೇಕು ಎಂದು ಮಹತ್ವದ ತೀರ್ಪು ನೀಡಿದೆ. ಇದೆಲ್ಲವನ್ನೂ ಗಾಳಿಗೆ ತೂರಿರುವ ಸಿದ್ದರಾಮಯ್ಯ, ಅಕ್ರಮ‌ ಗಣಿಗಾರಿಕೆಗೆ ಅನುವು ಮಾಡಿದ್ದಾರೆ.ಇದಕ್ಕಿಂತ ಗಂಡಾಂತರಕಾರಿ ವಿಚಾರ ಅಂದ್ರೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಎಚ್.ಡಿ. ಕುಮಾರಸ್ವಾಮಿ ಸಹ ಸಿದ್ದರಾಮಯ್ಯ ಮಾಡಿದ ತಪ್ಪನ್ನೇ ಬೆಂಬಲಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ