ಆರ್.ಟಿ. ಓ ಕಾರ್ಯಚಾರಣೆ – ನೂರಾರು ಆಟೋ ಅಂದರ್

ಹುಬ್ಬಳ್ಳಿ- ಅವರಿಗೆ ಈ ಹಿಂದೆ ಪೊಲೀಸರು ಎಚ್ಚರಿಕೆ ನೀಡಿದ್ರು, ಅದರಲ್ಲಿ ಕೆಲವರು ಪೊಲೀಸ್ ಇಲಾಖೆಯ ಎಚ್ಚರಿಕೆಗೆ ಎಚ್ಚೆತ್ತು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಿದ್ರೆ. ಇನ್ನೂ ಕೆಲವರು ನಮ್ಮನ ಕೇಳೋರ್ಯಾರು ಅನ್ನೋತರ ತಮಗೆ ಇಷ್ಟ ಬಂದಂಗೆ ಓಡಾಡುತ್ತಿದ್ದರು. ಅಲ್ಲದೇ ಅವರು ನಿಯಮ ಉಲ್ಲಂಘನೆಯ ಬಗ್ಗೆ ದೂರುಗಳು ಕೂಡಾ ಹೆಚ್ಚಾಗುತ್ತಿದಂತೆ, ಎಚ್ಚೆತುಕೊಂಡ ಪೊಲೀಸ ಇಲಾಖೆ ಹಾಗೂ ಆರ್ ಟಿ ಓ ಅಧಿಕಾರಿಗಳು ಧೀಡಿರ್ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಹೌದು ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ. ಒಂದು ಕಡೆ ಅಟೋಗಳನ್ನು ಪರಿಶೀಲನೆ ನಡೆಸುತ್ತಿರು ಸಂಚಾರಿ ಪೊಲೀಸರು ಇನ್ನೊಂದುಕಡೆ ತಲೆ ಮೆಲೆ ಗುಡ್ಡ ಕುಸಿದ ಹಾಗೆ ಯೋಚನೆ ಮಾಡುತ್ತಿರುವ ಅಟೋ ಚಾಲಕರು. ಮಗದೊಂದು ಕಡೆ ದಾಖಲಾತಿ ಇಲ್ಲದೆ ಇರುವ ಅಟೋಗಳನ್ನು ವಶಕ್ಕೆ ಪಡೆಯುತ್ತಿರುವ ಹುಬ್ಬಳ್ಳಿ ಧಾರವಾಡ ಆರ್ ಟಿ ಓ ಅಧಿಕಾರಿಗಳು. ನಗರದ ಚೆನ್ನಮ್ಮ ವೃತ, ಕಾರವಾರ ರಸ್ತೆ ಸೇರಿದಂತೆ ನಗರದ ಹಲವು ಕಡೆ ಅಟೋಗಳ ಮೇಲೆ ದಾಳಿ ನಡೆಸಿದರು. ಕಳೆದ ಹಲವು ದಿನಗಳ ಹಿಂದೆ ಹುಬ್ಬಳ್ಳಿ ಧಾರವಾಡ ಪೊಲೀಸರು ಆಯುಕ್ತರಾದ ಎಂ ಎನ್ ನಾಗರಾಜ್ ನೇತೃತ್ವದಲ್ಲಿ ಅಟೋ ಚಾಲಕರ ಸಭೆ ನಡೆಸಿ ತಮ್ಮ ಅಟೋಗಳ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು ಎಚ್ಚರಿಕೆ ನೀಡಿದರು. ಪೊಲೀಸರ ಈ ಎಚ್ಚರಿಕೆಗೆ ಓಗೊಟ್ಟು ಕೆಲವರು ತಮ್ಮ ಅಟೋ ವಾಹನದ ದಾಖಲಾತಿಗಳನ್ನು ಸರಿ ಮಾಡಿಕೊಂಡಿದರು. ಆದರೆ ಕೆಲವರು ನಮ್ಮನು ಕೆಳೋರ್ಯಾರು ಅನ್ನು ರೀತಿಯಲ್ಲಿ ನಗರದಲ್ಲಿ ಅಟೋ ಸಂಚಾರ ನಡೆಸುತ್ತಿದ್ದರು. ಇದರಿಂದ ಸಂಚಾರಿ ನಿಯಮಗಳ ಉಲಂಘನೆ ಸಂಖ್ಯೆಗಳು ಹೆಚ್ಚಾಗುತ್ತಿಂದತೆ ಹಿನ್ನಲೆಯಲ್ಲಿ‌ ಪೊಲೀಸರು ಹಾಗೂ ಆರ್ ಟಿ ಓ ಅಧಿಕಾರಿಗಳು ದಾಳಿ ನಡೆಸಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದವರಿಗೆ ಐನೂರು ರೂಪಾಯಿ ಹಾಗೂ ಇನ್ಸೂರೆನ್ಸ್ ಇಲ್ಲದವರಿಗೆ ನೂರು ರೂಪಾಯಿ ದಂಡವಿಧಿಸಿದರೆ, ವಾಹನ ಪರ್ಮಿಟ್, ಆರ್ ಟಿ ಓ ನಲ್ಲಿ ವಾಹನ ರಿಜಿಸ್ಟರ್ ಮಾಡದವರಿಗೆ, ಆರ್ ಸಿ ಕಾರ್ಡು ಇಲ್ಲದ 70ಕ್ಕೂ ಹೆಚ್ಚ ಅಟೋಗಳನ್ನು ವಶಕ್ಕೆ ಪಡೆದರು. ಇನ್ನೂ ಪೊಲೀಸರು ಹಾಗೂ ಆರ್ ಟಿ ಓ ಅಧಿಕಾರಿಗಳು ಬೆಳಂ ಬೆಳಗ್ಗೆ ಅಟೋಗಳ ವಿರುದ್ಧ ದಾಳಿ ನಡೆಸಿದರಿಂದ ಕೆಲವು ಅಟೋ ಚಾಲಕರು ಬೆಂಬಲ ವ್ಯಕ್ತಪಡಿಸಿದ್ರೆ. ಇನ್ನೂ ಕೆಲವರು ಅಟೋ ಚಾಲಕರು ಸಂಚಾರಿ ಪೊಲೀಸರು ಅತ್ತಿ ಹೆಚ್ಚು ದಂಡ ಹಾಕುತ್ತಿದ್ದಾರೆ ಎಂದು ಅರೋಪಿಸಿದರು. ಇದರಿಂದ ಅಟೋ ಚಾಲಕರಿಗೆ ತುಂಭಾ ತೊಂದರೆಯಾಗುತ್ತಿದ್ದು. ಲೈಸೆನ್ಸ್ ಹಾಗೂ ಇನ್ಸೂರೆನ್ಸ್ ಇಲ್ಲದ ಚಾಲಕರಿಗೆ ವಿಧಿಸುವ ದಂಡ ಪ್ರಮಾಣ ಕಡೆಮೆ ಮಾಡಬೇಕು ಇಲ್ಲವಾದರೆ ನಾವು ಅನಿವಾರ್ಯವಾಗಿ ಹೋರಾಟದ ಮಾರ್ಗ ಹಿಡಿಯ ಬೇಕಾಗುತ್ತದೆ ಎಂದು ಹೇಳಿದರು. ಇಷ್ಟುದಿನ ನಗರದಲ್ಲಿ ಎಲ್ಲಂದರಲ್ಲಿ ಅಟೋಗಳನ್ನು ನಿಲಿಸಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಅಟೋ ಚಾಲಕರಿಗೆ ಪೊಲೀಸ ಇಲಾಖೆ ಬಿಸಿ ಮುಟ್ಟಿಸಿದ್ದು, ಇನ್ನಾದರು ಅಟೋ ಚಾಲಕರು ಎಚ್ಚೆತುಕೊಂಡು ಸಂಚಾರಿ ನಿಯಮವನ್ನು ಪಾಲನೆ ಮಾಡಿ. ಅಟೋ ಚಾಲಕರ ಕುರಿತು ಸಾರ್ವಜನಿಕರಲ್ಲಿದ್ದ, ತಪ್ಪು ಅಭಿಪ್ರಾಯಕ್ಕೆ ತೆರೆ ಎಳೆಯುತ್ತಾರೋ ಎಂಬುವುದನ್ನು ಕಾಯ್ದು ನೋಡಬೇಕು..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ