ಬೆಂಗಳೂರು, ಜುಲೈ 13: ವಿಶ್ವ ದರ್ಜೆಯ ರೋಬೋಟಿಕ್ ಹಾಗೂ ಕೋಡಿಂಗ್ ಕೇಂದ್ರ, “ಜೀಬ್ರಾ ರೋಬೋಟಿಕ್ಸ್”, ಬೆಂಗಳೂರಿನಲ್ಲಿ ಮೊದಲ ರೋಬೋಟಿಕ್ ಶಾಲೆ ಆರಂಭಿಸುವುದಾಗಿ ಇಂದು ಘೋಷಿಸಿದೆ. ಇದು ಭಾರತದ ಮಕ್ಕಳಿಗೆ ಉತ್ತಮ ಗುಣಮಟ್ಟದ ಚಟುವಟಿಕೆಗಳನ್ನು ಪರಿಚಯಿಸುವ ಗುರಿ ಹೊಂದಿದೆ. ಕೆನಡಾ ಮೂಲದ ಈ ಸಂಸ್ಥೆಯ ತರಗತಿಗಳು ಆಗಸ್ಟ್ 1ರಿಂದ ಬೆಂಗಳೂರಿನ ಜಯನಗರದಲ್ಲಿ ಆರಂಭಗೊಳ್ಳಲಿವೆ. ಜುಲೈ 14ರಿಂದ ಪ್ರತಿ ದಿನ ಮಧ್ಯಾಹ್ನ 1ರಿಂದ 3ರವರೆಗೆ ಓಪನ್ ಹೌಸ್ ಚಟುವಟಿಕೆಗಳು ನಡೆಯಲಿವೆ.
ಈ ಜೀಬ್ರಾ ರೋಬೋಟಿಕ್ಸ್ ಸಂಸ್ಥೆ 2014ರಲ್ಲಿ ಕೆನಡಾದ ಗ್ರೇಟ್ ಟೊರೊಂಟೋ ಪ್ರದೇಶದಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡಿತು.
“ನಾವು ಸ್ಥಳೀಯ ಮಕ್ಕಳಿಗೆ ರೋಬೊಟಿಕ್ ಹಾಗೂ ಕೋಡಿಂಗ್ ತರಗತಿಗಳನ್ನು ಸುಲಭದಲ್ಲಿ ಒದಗಿಸಲು ಸಿದ್ಧರಾಗಿದ್ದೇವೆ. ಭಾರತದಲ್ಲಿ ಜೀಬ್ರಾ ರೋಬೊಟಿಕ್ಸ್ ಆರಂಭಿಸಲು ಕೊಲ್ಲಾಟ್ರಿಕ್ಸ್ ಟೆಕ್ನಾಲಜೀಸ್ ಜೊತೆಗೆ ಜೆವಿ ನಿಂದ ಸಾಧ್ಯವಾಗುತ್ತಿದೆ. ಈ ದೇಶದಲ್ಲಿ ನಾವೀಗ ಒಂದು ಸಣ್ಣ ಹೆಜ್ಜೆ ಇಟ್ಟಿದ್ದು, ಸಾಗಬೇಕಾದ ಹಾದಿ ಸಾಕಷ್ಟಿದೆ” ಎಂದಿದ್ದಾರೆ ಸತೀಶ್ ತ್ಯಾಗರಾಜನ್.
ತರಗತಿಯಲ್ಲಿ ಉಲ್ಲಾಸದಾಯಕ ವಾತಾವರಣದ ಅಗತ್ಯತೆ ಕುರಿತು ವಿವರಿಸಿದ ಸಹ ಸಂಸ್ಥಾಪಕ ಸತೀಶ್, “ಕಲಿಕೆ ಸರಳ ಹಾಗೂ ಉಲ್ಲಾಸದಾಯಕವಾಗಿರಬೇಕು. ವಿಶೇಷವಾಗಿ ರೋಬೋಟಿಕ್ಸ್‍ನಂತರ ಆಸಕ್ತಿದಾಯಕ ಕಲಿಕೆಯಲ್ಲಿ, ಮಕ್ಕಳು ಸ್ನೇಹಪರ ವಾತಾವರಣದಲ್ಲಿ ಯಾವುದೇ ಒತ್ತಡವಿಲ್ಲದೆ ಕಲಿಯಬೇಕು” ಎಂದರು.
ಜೀಬ್ರಾ ರೋಬೋಟಿಕ್ಸ್ ಸಂಸ್ಥೆಯ ವಿಭಿನ್ನ ಪ್ರಯತ್ನಗಳು ಅದರ ವಿದ್ಯಾರ್ಥಿಗಳಿಗೆ ಲಾಭದಾಯಕವಾಗಿದ್ದು, ಅವರು ಹಲವು ಸ್ಪರ್ಧೆಗಳನ್ನು ಗೆದ್ದಿದ್ದಲ್ಲದೆ, ಪ್ರಾಂತೀಯ ಹಾಗೂ ರಾಷ್ಟ್ರೀಯ ಮಟ್ಟಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೆಲ ವಿದ್ಯಾರ್ಥಿಗಳು ವಿಶ್ವ ರೋಬೋಟಿಕ್ಸ್ ಒಲಂಪೇಡ್‍ನಲ್ಲಿ ಕೆನಡಾವನ್ನು ಪ್ರತಿನಿಧಿಸಿರುವುದು ಸಂಸ್ಥೆಗೆ ಸಿಕ್ಕಿದ ಮತ್ತೊಂದು ಗರಿಯಾಗಿದೆ.
ಜೀಬ್ರಾ ರೋಬೋಟಿಕ್ಸ್ ಕುರಿತು
ಜೀಬ್ರಾ ರೋಬೋಟಿಕ್ಸ್ ಸಂಸ್ಥೆಯನ್ನು 2014ರಲ್ಲಿ ಕೆನಡಾನ ಮಿಸ್ಸಿಸೌಗ ಎಂಬಲ್ಲಿ ವಿದ್ಯಾರ್ಥಿಗಳಿಗೆ ಉಲ್ಲಾಸದಾಯಕ, ಪ್ರೋತ್ಸಾಹದಾಯಕ ಹಾಗೂ ಸ್ಪರ್ಧಾತ್ಮಕ ಧೋರಣೆಯಲ್ಲಿ ಶಿಕ್ಷಣ ಕಲಿಸುವ ಉದ್ದೇಶದಿಂದ ಆರಂಭಿಸಲಾಯಿತು. ವಿದ್ಯಾರ್ಥಿಗಳಿಗೆ ವಿಭಿನ್ನ ಚಟುವಟಿಕೆಗಳ ಮೂಲಕ ಶಿಕ್ಷಣ ನೀಡುವ ಬದ್ಧತೆ ಹಾಗೂ ಬೆಂಬಲಿತ ವ್ಯವಸ್ಥೆ ಇದನ್ನು ಇತರ ಶೈಕ್ಷಣಿಕ ರೋಬೋಟಿಕ್ ಸಂಸ್ಥೆಗಳಿಂದ ಭಿನ್ನವಾಗಿಸುತ್ತದೆ.