
ವಿಜಯಪುರ, ಜು.12- ಕಳೆದ ರಾತ್ರಿ ಇಟ್ಟಂಗಿ ಗ್ರಾಮದಲ್ಲಿ ಕಳ್ಳರು ಮೂರು ಮನೆ ಹಾಗೂ ದೇವಸ್ಥಾನದಲ್ಲಿ ಸರಳಿ ಕಳ್ಳತನ ಮಾಡಿದ್ದಾರೆ. ಗ್ರಾಮದ ಅಮೋಘಸಿದ್ದೇಶ್ವರ ದೇವಸ್ಥಾನದಲ್ಲಿ ಸುಮಾರು ಅರ್ಧ ಕೆಜಿಗೂ ಹೆಚ್ಚು ಚಿನ್ನಾಭರಣಗಳನ್ನು ದೋಚಲಾಗಿದೆ ಹಾಗೂ ಹುಂಡಿಯುನ್ನು ಕೂಡ ಹೊತ್ತೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಹತ್ತಿರದಲ್ಲೇ ಇದ್ದ ಬೀಗ ಹಾಕಿದ್ದ ಮನೆಗಳನ್ನು ನೋಡಿದ ಕಳ್ಳರು ಅಲ್ಲಿಯೂ ಕೂಡ ತಮ್ಮ ಕೈಚಳಕ ತೋರಿಸಿದ್ದಾರೆ. ಮನೆಯಲ್ಲಿದ್ದ ಕೆಲವು ವಸ್ತುಗಳು, ಚಿನ್ನಾಭರಣ ಕೂಡ ಕಳುವಾಗಿವೆ. ವಿಜಯಪುರ ಗ್ರಾಮಾಂತರ ಠಾಣೆ ಪೆÇಲೀಸರು ಸ್ಥಳಕ್ಕೆ ದಾವಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.