ಹೈನೋದ್ಯಮದಲ್ಲಿ ಲೂಟಿ: ಎಚ್.ಡಿ.ರೇವಣ್ಣ ಆರೋಪ

 

ಬೆಂಗಳೂರು, ಜು.12- ಕ್ಷೀರಧಾರೆ ಯೋಜನೆಯಲ್ಲಿ ಹಾಗೂ ಪಶು ಆಹಾರ ಉತ್ಪಾದನೆಯಲ್ಲಿ ಲೂಟಿ ನಡೆಯುತ್ತಿದೆ. ಅದನ್ನು ಮಟ್ಟ ಹಾಕಲು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ನಡುವೆ ಮಾತನಾಡಿದ ಅವರು, ಹಾಲಿನ ಡೈರಿಯ ಕಾರ್ಯದರ್ಶಿಗಳು ಬೇರೆ ಬೇರೆ ಹೆಸರಿನಲ್ಲಿ ತಾವೇ 100 ಲೀಟರ್ ಹಾಲು ಮಾರಾಟ ಮಾಡುತ್ತಿದ್ದು, ಸರ್ಕಾರದಿಂದ ಸಿಗುವ 5ರೂ. ಪೆÇ್ರೀ ಲಪಟಾಯಿಸುತ್ತಿದ್ದಾರೆ. ಹಾಲಿಗೆ ಹಿಂದೆ ಯಡಿಯೂರಪ್ಪ ಅವರು 2 ರೂ. ಪೆÇ್ರೀ ಧನ ನೀಡಿದ್ದರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು 5 ರೂ.ಗಳಿಗೆ ಹೆಚ್ಚಿಸಿದ್ದರು. ಇದನ್ನು ನೇರವಾಗಿ ರೈತರಿಗೆ ತಲುಪಿಸುವ ಬದಲು ಕಾರ್ಯದರ್ಶಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಾನು ಕೆಎಂಎಫ್ ಅಧ್ಯಕ್ಷನಾಗಿದ್ದ 8 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಗುಜರಾತ್‍ನಲ್ಲಿ ಕ್ಷೀರ ಕ್ರಾಂತಿ ಮಾಡಿ ಕುರಿಯನ್ ಅವರು ದೇವೇಗೌಡರ ಮೂಲಕ ಸಂಪರ್ಕಿಸಿ ಬೆಂಗಳೂರಿನಲ್ಲಿ ಮೆಗಾ ಡೈರಿ ಸ್ಥಾಪನೆಯಾಗಲು ನಾನು ಶ್ರಮಪಟ್ಟೆ. 5 ಸಾವಿರ ಟನ್ ಇದ್ದ ಪಶುಆಹಾರ ಉತ್ಪಾದನೆ 45 ಸಾವಿರ ಟನ್‍ಗೆ ಹೆಚ್ಚಿಸಿದೆ. ಆದರೆ ಪಶು ಆಹಾರ ಉತ್ಪಾದನೆಯಲ್ಲೂ ಅಕ್ರಮ ನಡೆಯುತ್ತಿದೆ. ರೈತರ ಹೆಸರಿನಲ್ಲಿ ದುಡ್ಡು ತಿನ್ನುವವರು ಯಾರೇ ಆಗಿದ್ದರೂ ಮುಲಾಜಿಲ್ಲದೆ ಮಟ್ಟ ಹಾಕಬೇಕು ಎಂದು ಹೇಳಿದರು.
ಆಗ ಸ್ಪೀಕರ್ ರಮೇಶ್‍ಕುಮಾರ್ ಅವರು, ಹಾಗೆಲ್ಲ ಎಲ್ಲರನ್ನೂ ಏಕಾಏಕಿ ಮಟ್ಟ ಹಾಕಬೇಡಿ. ಸಂಬಂಧಿಕರು, ಜಾತೀಸ್ಥರನ್ನು ನೋಡಿಕೊಂಡು ಕ್ರಮಕೈಗೊಳ್ಳಿ. ಹಿಂದು-ಮುಂದೆ ಇಲ್ಲದೆ ಇರುವವರು ಇದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಲು ನಮ್ಮ ಅಭ್ಯಂತರ ಇಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.
ಆಗ ರೇವಣ್ಣ ಅವರು ನನ್ನ ಸಂಬಂಧಿಕರ್ಯಾರೂ ಇಲ್ಲ. ರೈತರ ಹಣ ಲೂಟಿ ಮಾಡುವವರು ಯಾರೇ ಇದ್ದರೂ ಮುಲಾಜಿಲ್ಲದೆ ಶಿಕ್ಷಿಸಬೇಕಿದೆ ಎಂದು ಒತ್ತಿ ಹೇಳಿದರು.
ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆಎಂಎಫ್‍ಗೆ ಅಗತ್ಯಕ್ಕಿಂತ ಹೆಚ್ಚಾಗಿ ಸಿಬ್ಬಂದಿಗಳನ್ನು ನೇಮಿಸಿ ಆರ್ಥಿಕ ಹೊರೆ ಮಾಡಲಾಗಿತ್ತು. ಹಾಲಿಗೆ 5 ರೂ. ಪೆÇ್ರೀ ಧನ ನೀಡಲು ಆರಂಭಿಸಿದಾಗ 50ಲಕ್ಷ ಲೀಟರ್ ಹಾಲಿಗೆ ಬದಲಾಗಿ 75 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಹೆಚ್ಚುವರಿ 25 ಲಕ್ಷ ಲೀಟರ್ ಹಾಲಿನಿಂದ ಕೆಎಂಎಫ್‍ಗೆ ಆಗುವ ನಷ್ಟವನ್ನು ತಪ್ಪಿಸಲು ಕ್ಷೀರಭಾಗ್ಯ ಯೋಜನೆ ಜಾರಿಗೆ ತರಲಾಯಿತು. 1.2 ಕೋಟಿ ಮಕ್ಕಳಿಗೆ ಹಾಲು ನೀಡುವ ಮೂಲಕ ಅವರಲ್ಲಿ ಪೌಷ್ಟಿಕಾಂಶ ಹೆಚ್ಚಿಸಲಾಗಿದೆ. ಹೈನುಗಾರಿಕೆ ರೈತರ ಬದುಕನ್ನು ಹಸನು ಮಾಡುವ ಉತ್ತಮವಾದ ಉಪಕಸುಬು. ಇದರಿಂದ ರೈತರಿಗೆ ಲಾಭವಾಗಬೇಕು, ಕೆಎಂಎಫ್‍ಗೂ ನಷ್ಟವಾಗಬಾರದು. ಮಾರುಕಟ್ಟೆ ವಿಸ್ತರಣೆಯಾಗಬೇಕು. ಅಂತಹ ಸಲಹೆಗಳನ್ನು ನೀಡಿ ಎಂದು ಸದಸ್ಯರಲ್ಲಿ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ