ದಂಗಲ್ ಖ್ಯಾತಿಯ ಪೋಗಟ್ ಕುಟುಂಬವನ್ನು ಚಹಾಕೂಟಕ್ಕೆ ಆಹ್ವಾನಿಸಿದ ದಕ್ಷಿಣ ಕೊರಿಯಾ ಪ್ರಥಮ ಮಹಿಳೆ

ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರ ಪ್ರಸಿದ್ದ ಚಿತ್ರ ’ದಂಗಲ್’ ನಲ್ಲಿ ಮಿಂಚಿದ್ದ ಪೋಗಟ್ ಕುತುಂಬ ಸದಸ್ಯರನ್ನು ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಜಿಮ್ ಜಂಗ್ ಸೂಕ್ ತಾವು ಚಹಾ ಕೂಟಕ್ಕೆ ಆಹ್ವಾನಿಸಿದ್ದಾರೆ.
ನಾಲ್ಕು ದಿನಗಳ ಭೇತಿಗಾಗಿ ಭಾರತಕ್ಕೆ ಆಗಮಿಸಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ದಂಪತಿ ’ದಂಗಲ್’ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.
ವಿದ್ಯಾರ್ಥಿಗಳ ಜತೆ ಸಿನಿಮಾ ವೀಕ್ಷಿಸಿದ ದ. ಕೊರಿಯಾ ಅಧ್ಯಕ್ಷರ ಪತ್ನಿ ಪೋಗಟ್ ಕುಟುಂಬಕ್ಕೆ ಚಹಾಕೂಟದ ಆಹ್ವಾನ ನಿಡಿದ್ದಾರೆ ಎಂದು ಖ್ಯಾತ ಕುಸ್ತಿ ಪಟು ಮಹಾವೀರ್ ಸಿಂಗ್ ಪೋಗಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಒಂದು ಬಟ್ಟಲು ಚಹಾವನ್ನು ಆಕೆಯೊಂದಿಗೆ ಆಹ್ವಾನಿಸಿರುವುದನ್ನು ನಾವು ಗೌರವಿಸುತ್ತೇವೆ, ದಂಗಲ್ ಚಿತ್ರವನ್ನು ದ.. ಕೊರಿಯಾದ  ಮೊದಲ ಮಹಿಳೆ ಬಹಳ ಮೆಚ್ಚಿಕೊಂಡಿದ್ದಾರೆ ಎಂದು ತಿಳಿದು ನಮಗೆ ಸಂತಸವಾಗಿದೆ”  ಅವರು ದೂರವಾಣಿಯ ಮೂಲಕ ಪಿಟಿಐಗೆ ತಿಳಿಸಿದ್ದಾರೆ.
2016 ರಲ್ಲಿ ಬಿಡುಗಡೆಯಾದ ‘ದಂಗಲ್’, ಮಹಾವೀರ್ ಸಿಂಗ್ ಪೋಗಟ್ ಹಾಗು ಅವರ ಪುತ್ರಿಯರಾದ ಗೀತಾ ಮತ್ತು ಬಬಿತಾರ ಜೀವನವನ್ನು ಆಧರಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ