ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ ಸುರಿಯುತ್ತಿರುವ ಜಡೆ ಮಳೆಗೆ ವಾಹನ ಸವಾರರು ಪರದಾಡುವಂತಾಗಿದೆ. ಕೆಶ್ವಾಪುರದ ರಸ್ತೆಯೊಂದರಲ್ಲಿ ದ್ವಿಚಕ್ರ ವಾಹನ ಸವಾರರು ಸಾಲುಗಟ್ಟಿ ಬೀಳುತ್ತಿದ್ದಾರೆ. ಇದಕ್ಕೆಲ್ಲೆ ಸ್ಥಳೀಯ ಆಡಳಿತವೇ ಕಾರಣ ಎನ್ನುತ್ತಿರುವ ಸಾರ್ವಜನಿಕರು, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ಇಲ್ಲಿನ ಕೇಶ್ವಾಪುರದ ಕಾನ್ವೆಂಟ ಸ್ಕೂಲ್ ಎದುರಿಗೆ ಇರುವ ಮುಖ್ಯರಸ್ಥೆಯಲ್ಲಿ ದ್ವಿಚಕ್ರ ವಾಹನಗಳು ಏಕಾಏಕಿ ಬೀಳತೊಡಗಿವೆ. ಯಾವುದೇ ಮಾಹಿತಿ ಇಲ್ಲದೆ ಬರುವ, ದ್ವಿಚಕ್ರ ವಾಹನ ಸವಾರರು ವಾಹನ ಪಲ್ಟಿಯಾದ ಪರಿಣಾಮ ಗಾಯಗೊಂಡಿದ್ದಾರೆ. ಅಷ್ಟಕ್ಕು ಇದಕ್ಕೆ ಮುಖ್ಯ ಕಾರಣ ವೆಂದರೆ, ಕೆಲ ದಿನಗಳ ಹಿಂದೆ ಆ ರಸ್ತೆಯನ್ನ ಅಗೆದು, ಒಳ ಚರಂಡಿ ದುರಸ್ತಿ ಮಾಡಲಾಗಿತ್ತು. ಆದರೆ, ಕಾಮಗಾರಿ ನಂತರ, ರಸ್ತೆಗೆ ಡಾಂಬರೀಕರಣ ಮಾಡದೆ ಕೇವಲ ಮಣ್ಣಿನಿಂದ ಮುಚ್ಚಲಾಗಿದೆ. ಹೀಗಾಗಿ ಸಹಜವಾಗಿಯೇ ಬರುವ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಬೀಳತೊಡಗಿದ್ದಾರೆ. ವಾಹನ ಸವಾರರ ಪರದಾಟ ಕಂಡ ಸ್ಥಳೀಯರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಕೂಡಲೇ ರಸ್ತೆ ದುರಸ್ತಿ ಮಾಡಿಸಬೇಕೆಂದು ಪಾಲಿಕೆಗೆ ಆಗ್ರಹಿಸಿದರು.