ಬೆಂಗಳೂರು, ಜು.10- ಕಳೆದ ಐದು ವರ್ಷಗಳಲ್ಲಿ ಗೃಹ ಇಲಾಖೆಯಲ್ಲಿ 26,188 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್‍ನಲ್ಲಿ ಹೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ನಂಜುಂಡಿ ವಿಶ್ವಕರ್ಮ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರತಿ ವರ್ಷ ಪೆÇಲೀಸ್ ಇಲಾಖೆಯಲ್ಲಿ 4 ರಿಂದ 5 ಸಾವಿರ ಹುದ್ದೆಗಳು ಖಾಲಿಯಾಗುತ್ತಿವೆ. ಆದರೆ 2008ರಿಂದ 2013ರವರೆಗೆ ಯಾವುದೇ ಹುದ್ದೆಗಳನ್ನು ಭರ್ತಿ ಮಾಡಿರಲಿಲ್ಲ. ಈ ಹಿಂದೆ ನಮ್ಮ ಸರ್ಕಾರದಲ್ಲಿ 1582 ಸಬ್ ಇನ್ಸ್‍ಪೆಕ್ಟರ್ 23,104 ಕಾನ್ಸ್‍ಟೇಬಲ್ ಹುದ್ದೆಗಳನ್ನು ನೇಮಕ ಮಾಡಲಾಯಿತು.
ನೇಮಕ ಪ್ರಕ್ರಿಯೆ ನಡೆಯುತ್ತಿರುತ್ತವೆ. ನಮ್ಮಲ್ಲಿ 10 ಖಾಯಂ ತರಬೇತಿ ಶಾಲೆ, 3 ತಾತ್ಕಾಲಿಕ ತರಬೇತಿ ಶಾಲೆ ಇವೆ. ಅವುಗಳನ್ನು ನೋಡಿಕೊಂಡು ನಾವು ನೇಮಕ ಮಾಡಿಕೊಳ್ಳಬೇಕಿದೆ. ಈ ಹಿಂದೆ ನಾನು ಗೃಹ ಸಚಿವನಾಗಿದ್ದಾಗಲೇ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿರುವುದಾಗಿ ತಿಳಿಸಿದರು.
ಬ್ರಿಟೀಷರ ಕಾಲದ ಆಡಳಿತ ಪದ್ಧತಿಯನ್ನು ರದ್ದುಪಡಿಸಿ ಅವರ ಬದಲಿಗೆ 373 ಅನುಯಾಯಿ ಹುದ್ದೆಗಳನ್ನು ಹೊಸದಾಗಿ ಸೃಷ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಸಿಬ್ಬಂದಿಗಳಿಗೆ ಒತ್ತಡ ಹೆಚ್ಚಿದ್ದರೂ ಸಹ ಲಭ್ಯವಿರುವ ಸಿಬ್ಬಂದಿಯಿಂದಲೇ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ನಡೆಸುತ್ತಿದ್ದು , ತನಿಖೆ ವಿಳಂಬವಾಗಿರುವುದು ಕಂಡು ಬಂದಿರುವುದಿಲ್ಲ.
ವಿಭಿನ್ನ ರೀತಿಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು , ಕರ್ತವ್ಯದ ಒತ್ತಡ ಸ್ವಲ್ಪ ಪ್ರಮಾಣದಲ್ಲಿದ್ದರೂ ನಮ್ಮ ಅಧಿಕಾರಿಗಳು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಒಟ್ಟಾರೆ ಪೆÇಲೀಸ್ ಇಲಾಖೆಯಲ್ಲಿ 1,26,282 ಮಂಜೂರಾಗಿರುವ ಹುದ್ದೆಗಳಿದ್ದು , 31,684 ಖಾಲಿ ಹುದ್ದೆಗಳಿವೆ. ಖಾಲಿ ಹುದ್ದೆಗಳನ್ನು ಕೆಪಿಎಸ್‍ಸಿ ಮುಂಬಡ್ತಿ ಮೂಲಕ ಹಾಗೂ ಅನುಕಂಪದ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ ಎಂದು ಹೇಳಿದರು.