ಬ್ರಿಸ್ಟಲ್: ಆರಂಭಿಕ ಬ್ಯಾಟ್ಸಮನ್ ರೋಹಿತ್ ಶಮಾ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಕೊಹ್ಲಿ ಪಡೆ ೨-೧ ಅಂತರದಿಂದ ಆಂಗ್ಲರ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆದ್ದ ಸಾಧನೆ ಮಾಡಿದೆ.
199 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಉತ್ತಮ ಆರಂಭ ನೀಡುವಲ್ಲಿ ಎಡವಿದ್ರು. ಧವನ್ 5 ರನ್ಗಳಿಸಿದ್ದಾಗ ಜೆಕಬ್ ಎಸೆತದಲ್ಲಿ ಡೇವಿಡ್ ವಿಲ್ಲಿಗೆ ಕ್ಯಾಚ್ ನೀಡಿ ಹೊರ ನಡೆದ್ರು. ನಂತರ ಬಂದ ಕನ್ನಡಿಗ ಕೆ.ಎಲ್.ರಾಹುಲ್ 19 ರನ್ ಬಾರಿಸಿ ಬೇಗನೆ ಪೆವಿಲಿಯನ್ ಸೇರಿದ್ರು.ನಂತರ ನಾಯಕ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೊತೆಗೂಡಿ ಆಂಗ್ಲರ ಬೌಲರ್ಗಳ ಬೆವರಿಳಿಸಿದ್ರು. ಈ ಜೋಡಿ ೩ನೇ ವಿಕೆಟ್ಗೆ 89 ರನ್ ಸೇರಿಸಿ ಪಂದ್ಯದ ಗತಿಯನ್ನೆ ಬದಲಿಸಿದ್ರು. ಆದ್ರೆ ಕೊಹ್ಲಿ 43 ರನ್ ಗಳಿಸಿ ಅರ್ಧ ಶತಕದತ್ತ ಮುನ್ನುಗುತ್ತಿದ್ದಾಗ ಕ್ರಿಸ್ ಜೋರ್ಡನ್ ಎಸೆತದಲ್ಲಿ ಕಟ್ ಅಂಡ್ ಬೌಲ್ಡ್ ಆದ್ರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಗಮಿಸಿ ಆಂಗ್ಲ ಬೌಲರ್ಗಳನ್ನ ಮನಬಂದಂತೆ ಚೆಂಡಾಡಿದ್ರು.ಮತ್ತೊಂದು ಬದಿಯಲ್ಲಿ ರೋಹಿತ್ ಶರ್ಮ ಬೌಂಡಿರಿಯ ಮೂಲೆ ಮೂಲೆಗೂ ಬೌಂಡರಿ ಸಿಕ್ಸ್ ರ್ಗಳ ಸುರಿಮಳೆಗೈದು ಶತಕದ ಸಂಭ್ರಮ ಆಚರಿಸಿದ್ರು. ಹಾರ್ದಿಕ್ ಕೊನೆಯಲ್ಲಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಭಾರತ 18.4 ಓವರ್ಗಳಲ್ಲಿ ಇನ್ನು 8 ಎಸೆತ ಬಾಕಿ ಇರುವಂತೆ 201 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟ್ಸ್ ಮನ್ ಜೆಸನ್ ರಾಯ್ ಅವರ ಅರ್ಧ ಅರ್ಧ ಶತಕದ ನೆರವಿನಿಂದ 20 ಓವರ್ಗಳಲ್ಲಿ ೯ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತ್ತು.
ಭಾರತ ಪರ ಹಾರ್ದಿಕ್ ಪಾಂಡ್ಯ ನಾಲ್ಕು ವಿಕೆಟ್ ಪಡೆದು ಮಿಂಚಿದ್ರು.