ಉತ್ತರಪ್ರದೇಶ: ಜೈಲಿನಲ್ಲಿ ಕುಖ್ಯಾತ ಗ್ಯಾಂಗ್’ಸ್ಟರ್ ಮುನ್ನಾ ಭಜರಂಗಿ ಹತ್ಯೆ

ಲಖನೌ: ಕುಖ್ಯಾತ ಗ್ಯಾಂಗ್’ಸ್ಟರ್ ಮತ್ತು ಮಾಫಿಯಾ ಡಾನ್ ಪ್ರೇಮ್ ಪ್ರಕಾಶ್ ಸಿಂಗ್ ಅಲಿಯಾಸ್ ಮುನ್ನಾ ಭಜರಂಗಿಯನ್ನು ಉತ್ತರಪ್ರದೇಶದ ಬಘ್’ಪತ್ ಜಿಲ್ಲಾ ಕಾರಾಗೃಹದಲ್ಲಿ ಹತ್ಯೆಯಾಗಿದೆ ಎಂದು ಸೋಮವಾರ ತಿಳಿದುಬಂದಿದೆ.
ಝಾನ್ಸಿ ಜೈಲಿನಲ್ಲಿದ್ದ ಭಜರಂಗಿಯನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದಷ್ಟೇ ಬಘ್’ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.
ಪ್ರಸ್ತುತ ಹತ್ಯೆಯಾಗಿರುವ ಗ್ಯಾಂಗ್’ಸ್ಟರ್ ಭಜರಗಿಂದ ಬಿಜೆಪಿ ಹಿರಿಯ ನಾಯಕ ಕೃಷ್ಣಾನಂದ್ ರೈ ಅವರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ.
ಸ್ಥಳೀಯ ನ್ಯಾಯಾಲಯವೊಂದಕ್ಕೆ ಕರೆದೊಯ್ಯುವ ಸಲುವಾಗಿ ಭಜರಂಗಿಯನ್ನು ಪೊಲೀಸ್ ವಾಹನದಲ್ಲಿರಿಸಲಾಗಿತ್ತು. ಈ ವೇಳೆ ಸುನೀಲ್ ರಥಿ ಎಂಬ ಮತ್ತೊಬ್ಬ ಆರೋಪಿ ಭಜರಂಗಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದ ಹೆಚ್ಚುವರಿ ಐಜಿಪಿ ತನಿಖೆಗೆ ಆದೇಶಿಸಿದ್ದು, ತನಿಖೆ ಪ್ರಗತಿಯಲ್ಲಿದೆ.
ಜೈಲಿನ ಸಹ ಕೈದಿಯ ಬಳಿಕ ಗನ್ ಹೇಗೆ ಬಂದಿತ್ತು ಸಿಕ್ಕಿತು ಎಂಬ ಪ್ರಶ್ನೆ ಇದೀಗ ಹಲವು ಅನುಮಾನಗಳಿಗೆ ಏಡೆ ಮಾಡಿಕೊಟ್ಟಿದೆ.
ಇತ್ತೀಚೆಗಷ್ಟೇ ಭಜರಂಗಿ ಪತ್ನಿ ಸೀಮಾ ಸಿಂಗ್ ಅವರು, ಉತ್ತರಪ್ರದೇಶದ ವಿಶೇಷ ಪೊಲೀಸರು ಜೈಲಿನಲ್ಲಿಯೇ ನನ್ನ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆಂಬು ಆರೋಪ ಮಾಡಿದ್ದರು. ಅಲ್ಲದೆ, ಈ ವಿಚಾರವನ್ನು ನ್ಯಾಯಾಲಯ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರ ಗಮನಕ್ಕೆ ತರುವುದಾಗಿಯೂ ತಿಳಿಸಿದ್ದರು. ಇದರ ಬೆನ್ನಲ್ಲೇ ಜೈಲಿನಲ್ಲಿಯೇ ಭಜರಂಗಿಯನ್ನು ಹತ್ಯೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ