ಟೀಂ ಇಂಡಿಯಾ ಮಾಜಿ ನಾಯಕ ಗಂಗೂಲಿ ಜನ್ಮದಿನ: ’ದಾದಾ’ ನನ್ನು ನಾಲ್ಕು ಹಂತಗಳಲ್ಲಿ ವಿವರಿಸಿದ ವೀರೇಂದ್ರ ಸೆಹ್ವಾಗ್

ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿಗೆ ಭಾನುವಾರ 46ನೇ ಜನ್ಮ ದಿನದ ಸಂಭ್ರಮ. ’ದಾದಾ’ ಎಂದೇ ಖ್ಯಾತರಾದ ಗಂಗೂಲಿ 500 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ದಾಖಲೆ ಹೊಂದಿದ್ದಾರೆ. ತಮ್ಮ ಕ್ರಿಕೆಟ್ ಜೀವನದಲ್ಲಿ ಉತ್ತಮ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದ ಗಂಗೂಳಿ ಪಂದ್ಯ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಈ ಸಂಬಂಧ ರಾಹುಲ್ ದ್ರಾವಿಡ್ ಒಮ್ಮೆ ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದು ’”ಆಫ್ ಸೈಡ್ ನಲ್ಲಿ , ಮೊದಲು ದೇವರು, ನಂತರ ಸೌರವ್ ಗಂಗೂಲಿ!”
ನಾಯಕನಾಗಿ, ಉತ್ತಮ ಬ್ಯಾಟ್ಸ್ ಮನ್ ಆಗಿ ಹೆಸರಾಗಿದ್ದ ಗಂಗೂಲಿ ಹುಟ್ಟುಹಬ್ಬಕ್ಕೆ ಭಾರತ ತಂಡದ ಇನ್ನೋರ್ವ ಆಟಗಾರನಾದ ವೀರೇಂದ್ರ ಸೆಹ್ವಾಗ್ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ಗಂಗೂಲಿ ನಾಯಕತ್ವದ ಆಟವನ್ನು ಸ್ಮರಿಸಿದ ಸೆಹ್ವಾಗ್ ಗಂಗೂಲಿ ಮೈದಾನದಲ್ಲಿ ಹೇಗಿರುತ್ತಿದ್ದರೆಂದು ನಾಲ್ಕು ಹಂತಗಳಲ್ಲಿ ವಿವರಿಸಿದ್ದಾರೆ.

ಲಾರ್ಡ್ಸ್ ನಲ್ಲಿ ಟೆಸ್ಟ್ ಕ್ರಿಕೆಟ್ ಶತಕ ಗಳಿಸುವ ಮೂಲಕ ಕ್ರಿಕೆಟ್ ನಲ್ಲಿ ತನ್ನ ಸಾಮರ್ಥ್ಯ ಪ್ರದರ್ಶನ ಮಾಡಿದ್ದ ಗಂಗೂ;ಲಿ ಒಟ್ಟು 18,575ರನ್ ಗಳೊಡನೆ ಭಾರತ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ವಿಶ್ವಕಪ್ ನಲ್ಲಿ ಭಾರತ ಪರವಾಗಿ 183 ರನ್ ಗಳಿಸಿ ಅತ್ಯಂತ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎನ್ನುವ ದಾಖಲೆ ಹೊಂದಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕನಾಗಿ ಗಂಗೂಲಿ ಅಂತರಾಷ್ಟ್ರೀಯ ಮೈದಾನಗಳಲ್ಲಿ ಯಶಸ್ವಿ ಸ್ಕಿಪ್ಪರ್ ಆಗಿ ಕಾಣಿಸಿಕೊಂಡಿದ್ದರು. 2003 ಟೀಂ ಇಂಡಿಯಾ ಗಂಗೂಲಿ ನಾಯಕತ್ವದಲ್ಲಿ ವಿಶ್ವಕಪ್ ಕ್ರಿಕೆಟ್ ನ ಫೈನಲ್ ತಲುಪಿರುವುದನ್ನು ಗಂಗೂಲಿ ಅಭಿಮಾನಿಗಳು, ಕಿಕೆಟ್ ಪ್ರೇಮಿಗಳು ಎಂದೂ ಮರೆಯಲು ಸಾಧ್ಯವಿಲ್ಲ.

ಇಂತಹಾ ಅದ್ಭುತ ಆಟಗಾರ ’ಕೋಲ್ಕತ್ತಾದ ರಾಜಕುಮಾರ’ ಸೌರವ್ ಗಂಗೂಲಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ