
ಮಂಡ್ಯ, ಜು.8- ಕಾರು ಕೆರೆಗೆ ಬಿದ್ದರೂ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಮುಂಜಾನೆ ಕೆ.ಆರ್.ಪೇಟೆ ತಾಲ್ಲೂಕಿನ ನೇರಳೆಕಟ್ಟೆ ಬಳಿ ನಡೆದಿದೆ. ಗ್ರಾಮದ ಕೆರೆ ಏರಿಯ ಮೇಲೆ ಚಲಿಸುತ್ತಿದ್ದ ಕಾರು ಏಕಾಏಕಿ ಕೆರೆಗೆ ಬಿದ್ದಿದೆ. ಅದರಲ್ಲಿದ್ದ ಕುರೇನಹಳ್ಳಿಯ ಯುವಕ ಸಾಹಸ ಮಾಡಿ ಕಾರಿನ ಗಾಜು ಒಡೆದು ಹೊರಗೆ ಬಂದು ಈಜಿ ದಡ ಸೇರಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಿದ್ದೆ ಮಂಪರಿನಲ್ಲಿದ್ದ ಚಾಲಕ ಅರಿಯದೆ ಕೆರೆಯಗೆ ಕಾರನ್ನು ಮುನ್ನುಗ್ಗಿಸಿದ್ದಾನೆ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ದಾವಿಸಿದ ಪೆÇಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ವಾಹನವನ್ನು ಮೇಲೆತ್ತಲು ಪ್ರಯಾಸಪಟ್ಟಿದ್ದಾರೆ.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.