ಬಾಗಿಲು ಹೊಡೆದು ಕಳ್ಳತನ

ಮಧುಗಿರಿ, ಜು.8- ಒಂದೇ ರಾತ್ರಿ ಪಟ್ಟಣದ ಎರಡು ಮನೆಗಳಲ್ಲಿ ಅಪರಿಚಿತರು ಬಾಗಿಲು ಹೊಡೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಪಟ್ಟಣದ ಗೌರಿಬಿದನೂರು ರಸ್ತೆಯಲ್ಲಿನ ಟಿವಿವಿ ಕಾಲೇಜ್ ಸಮೀಪದ ಮಹಾಲಿಂಗಪ್ಪ ಅವರ ಮನೆಯಲ್ಲಿನ ಬೀರುವನ್ನು ಮುರಿದು 30 ಸಾವಿರ ಹಣ ಹಾಗೂ ಬಟ್ಟೆ ಕದ್ದೊಯ್ದಿದ್ದಾರೆ. ಸಮೀಪದ ಶಂಕರ್ ಸಾಮಿಲ್ ಹಿಂಭಾಗದ ಹುಸೇನ್ ಸಾಬ್ ಎಂಬುವರ ಮನೆಯವರು ಮಲಗಿದ್ದ ವೇಳೆ ಮತ್ತೊಂದು ಬಾಗಿಲಿಗೆ ಚಿಲಕ ಹಾಕಿ ಯಾರೂ ಹೊರ ಬಾರದಂತೆ ಮಾಡಿದ ಕಳ್ಳರು ಬೀರುವಿನ ಬೀಗ ಹೊಡೆದು ಒಂದು ನಕ್ಲೇಸ್, ಒಂದು ಜತೆ ಕಿವಿಯೋಲೆ, ಎರಡು ಉಂಗುರ ಹಾಗೂ 35 ಸಾವಿರ ಹಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಈ ಸಂಬಂಧ ಮಧುಗಿರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ