ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಇಂದು ಟೌನ್ ಹಾಲ್ ಮುಂಭಾಗ ಅಜಿತಾಬ್ ಕುಟುಂಬಸ್ಥರು ಹಾಗೂ ಟೆಕ್ಕಿಗಳು ಪ್ರತಿಭಟನೆ ನಡೆಸಿದರು. ಅಜಿತಾಬ್ ತನ್ನ ಕಾರನ್ನು ಒಎಲ್ ಎಕ್ಸ್ ನಲ್ಲಿ ಮಾರಾಟ ಮಾಡಲು ಹೊರಟಿದ್ದರು. ಈ ಸಂಬಂಧ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲು ಹೋದವರು ಮರಳಿ ಬಂದಿಲ್ಲ. ಅಲ್ಲಿಂದಲೇ ನಾಪತ್ತೆಯಾಗಿದ್ದಾರೆ. ಈ ವರೆಗೂ ಅಜಿತಾಬ್ ಹಾಗೂ ಅವರ ಕಾರಿನ ಕುರಿತು ಯಾವ ಮಾಹಿತಿಯೂ ಸಿಕ್ಕಿಲ್ಲ. ಕುಟುಂಬಸ್ಥರು ಪ್ರತಿನಿತ್ಯ ಅಜಿತಾಬ್ ಮಾಹಿತಿಗಾಗಿ ಓಡಾಡುತ್ತಿದ್ದಾರೆ.
ಈ ಪ್ರಕರಣ ಸೋಷಿಯಲ್ ಮೀಡಿಯಾಗಳಾದ ಗೂಗಲ್, ವಾಟ್ಸ್ ಆಪ್, ಫೇಸ್ ಬುಕ್ ಮೂಲಕ ಪ್ಲಾನ್ ಮಾಡಲಾಗಿದೆ. ಆದರೆ ಈ ಸೋಷಿಯಲ್ ಮೀಡಿಯಾಗಳ ಆಡಳಿತ ವರ್ಗವೂ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾಗಳ ಮೇಲೆ ನಿಗಾ ಇಡುವ ಕುರಿತು ಸೂಕ್ತ ನಿಯಮಗಳನ್ನು ರಚಿಸಬೇಕು ಎಂದೂ ಈ ಸಮಯದಲ್ಲಿ ಅವರು ಒತ್ತಾಯಿಸಿದರು.