ಮಧುಗಿರಿ, ಜು.8- ರೈತರೊಬ್ಬರ ಜಮೀನಿನ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರವಾಗಿ ಲಂಚದ ಹಣ ಮುಂಗಡವಾಗಿ ಪಡೆದಿದ್ದ ಲೈನ್ ಮ್ಯಾನ್ ಒಬ್ಬನನ್ನು ಎಸಿಬಿ ಪೆÇಲೀಸರು ಬಲೆ ಬೀಸಿ ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ತಾಲ್ಲೂಕಿನ ಕಲ್ಲೇನಹಳ್ಳಿ ವಾಸಿ ದೂರುದಾರ ರಾಜಶೇಖರ್ ಅವರ ಜಮೀನಿಗೆ ಸುಮಾರು 18 ವಿದ್ಯುತ್ ಕಂಬಗಳನ್ನು ಈಗಾಗಲೇ ಸಿದ್ಧಗೊಳಿಸಿದ್ದರು. ಆದರೆ, ವಿದ್ಯುತ್ ಪ್ರಸರಣಕ್ಕಾಗಿ ತಂತಿ ಹಾಗೂ ಟ್ರಾನ್ಸ್ ಫಾರ್ಮರ್ ಜೋಡಣೆಯ ಕಾರ್ಯ ಬಾಕಿ ಇತ್ತು. ಈ ಸಂಬಂಧ ತನ್ನ ಜಮೀನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಂತೆ ಬೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಸಿದ್ದೇಶ್ ಎಂಬುವರಿಗೆ ತಿಳಿಸಿ 15 ಸಾವಿರ ಹಣಕ್ಕೆ ಮಾತಾಡಿ ವ್ಯವಹಾರ ಕುದರಿಸಿದ್ದರು. ಮುಂಗಡವಾಗಿ 10 ಸಾವಿರ ಹಣವನ್ನು ತನ್ನ ಬ್ಯಾಂಕ್ನ ಉಳಿತಾಯ ಖಾತೆಗೆ ಜಮಾ ಮಾಡುವಂತೆ ರೈತ ರಾಜಶೇಖರ್ಗೆ ಲೈನ್ ಮ್ಯಾನ್ ತಿಳಿಸಿದ್ದು, ಉಳಿದ 5 ಸಾವಿರ ಹಣವನ್ನು ಎಇಇ ಕೃಷ್ಣಮೂರ್ತಿರವರಿಗೆ ನೀಡಬೇಕೆಂದು ಹೇಳಿದ್ದ . ಅದರಂತೆ ಪಟ್ಟಣದ ಬೆಸ್ಕಾಂ ಕಚೇರಿಗೆ ಆಗಮಿಸಿದ್ದ.
ಸ್ಥಳದಲ್ಲಿಯೇ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ಹಣ ನೀಡಿರುವ ಮತ್ತು ಲೈನ್ ಮ್ಯಾನ್ ಸಿದ್ದೇಶ್ ತಮ್ಮ ವ್ಯವಹಾರದ ಬಗ್ಗೆ ದೂರವಾಣಿ ಕರೆಯಲ್ಲಿ ಮಾತನಾಡಿರುವ ಬಗ್ಗೆ ದಾಖಲೆಗಳನ್ನು ಪರೀಶಿಲಿಸಿಕೊಂಡು ಲೈನ್ಮ್ಯಾನ್ ವಿರುದ್ಧ ಕಾನೂನಿನ ಪ್ರಕಾರ ತನಿಖೆ ಕೈಗೊಂಡು ಆರೋಪಿಯನ್ನು ತಮ್ಮ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಎಸಿಬಿಯವರು ವಾರದಲ್ಲಿಯೇ ನಡೆಸಿದ ಎರಡನೆ ಕಾರ್ಯಾಚರಣೆ ಯಿಂದಾಗಿ ರೈತಾಪಿ ವರ್ಗದವರಲ್ಲಿ ಮಂದಾಹಾಸ ಮೂಡಿದೆ. ಇತ್ತಾ ತಾಲ್ಲೂಕಿನ ಕೆಲ ಲಂಚ ಬಾಕ ಅಧಿಕಾರಿಗಳಲ್ಲಿ ನಡುಕ ಉಂಟಾಗಿದೆ.