ಮೆಟ್ರೋ ರೈಲು ಯೋಜನೆಗೆ ಇನ್‍ಫೆÇೀಸಿಸ್ ಪ್ರತಿಷ್ಠಾನ ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ.ಇದು ಇತರೆ ಕಾಪೆರ್Çರೇಟ್ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

 

ಬೆಂಗಳೂರು, ಜು.7- ಮೆಟ್ರೋ ರೈಲು ಯೋಜನೆಗೆ ಇನ್‍ಫೆÇೀಸಿಸ್ ಪ್ರತಿಷ್ಠಾನ ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ.ಇದು ಇತರೆ ಕಾಪೆರ್Çರೇಟ್ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿಂದು ಇನ್‍ಫೆÇೀಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಸುಧಾಮೂರ್ತಿ ಹಾಗೂ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣ ಅವರು ಭೇಟಿ ಮಾಡಿದ ವೇಳೆ ಸಿಎಂ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ನಾರಾಯಣಮೂರ್ತಿ ಕುಟುಂಬ ಐಟಿ ಕ್ಷೇತ್ರದಲ್ಲಿ ಪ್ರಮುಖವಾಗಿದೆ. ಮೆಟ್ರೋ ಕಾಮಗಾರಿಗೆ ಇನ್‍ಫೆÇೀಸಿಸ್ ಫೌಂಡೇಷನ್ ವತಿಯಿಂದ ಬೃಹತ್ ಕಾಣಿಕೆ ನೀಡಲಾಗುತ್ತಿದೆ.ಸುಮಾರು 150 ರಿಂದ 200 ಕೋಟಿ ರೂ.ಗಳನ್ನು ಕಾಣಿಕೆ ನೀಡಲು ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುಧಾಮೂರ್ತಿಯವರು ಮಾತನಾಡಿ, ಗಳಿಸಿರುವ ಹಣ ಸಾರ್ವಜನಿಕರಿಗೆ ಸದುಪಯೋಗವಾಗಬೇಕು.ಜನಸಾಮಾನ್ಯರಿಗೆ ಅನುಕೂಲವಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಕೋನಪ್ಪನ ಅಗ್ರಹಾರದಲ್ಲಿ ಅತ್ಯುತ್ತಮವಾದ ಮೆಟ್ರೋ ರೈಲು ನಿಲ್ದಾಣ ಸ್ಥಾಪನೆ ಮಾಡಲು ನಿರ್ಧರಿಸಿದ್ದೇವೆ. ಜುಲೈ 19ರಂದು ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಿ ಹಾಕಲಾಗುವುದು ಎಂದು ತಿಳಿಸಿದರು.
ಹೆಸರು ಮಾಡಬೇಕೆಂಬ ಉದ್ದೇಶದಿಂದ ನಾವು ಹಣ ನೀಡುತ್ತಿಲ್ಲ. ಜನಸೇವೆ ನಮ್ಮ ಉದ್ದೇಶ. ಆಡದೇ ಮಾಡುವವನು ರೂಢಿಯೊಳಗೆ ಉತ್ತಮ ಎಂದರು.
ಕೋನಪ್ಪನ ಅಗ್ರಹಾರದಲ್ಲಿ 100 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮೆಟ್ರೋ ರೈಲು ನಿಲ್ದಾಣ ನಿರ್ಮಿಸಿ 30 ವರ್ಷಗಳವರೆಗೆ ನಿರ್ವಹಣೆಯನ್ನೂ ನಮ್ಮ ಪ್ರತಿಷ್ಟಾನ ಮಾಡಲಿದೆ ಎಂದು ಸುಧಾಮೂರ್ತಿ ವಿವರಿಸಿದರು.
ಇದಲ್ಲದೆ 100 ಕೋಟಿ ರೂ.ಗಳನ್ನು ಮೆಟ್ರೋ ರೈಲು ಹಳಿ ನಿರ್ಮಾಣ ಮಾಡಲು ಕೊಡಲಾಗುತ್ತದೆ ಎಂದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ದೇಣಿಗೆ ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ