ಕಸದಿಂದ ರಸ ತೆಗೆಯಬೇಕೆಂಬ ಗಾದೆ ಇದೆ.ಆದರೆ ಬಿಬಿಎಂಪಿಯಲ್ಲಿ ಕಸದಿಂದಲೇ ಕೋಟ್ಯಂತರ ಲೂಟಿಯಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ

ಬೆಂಗಳೂರು, ಜು.7-ಕಸದಿಂದ ರಸ ತೆಗೆಯಬೇಕೆಂಬ ಗಾದೆ ಇದೆ.ಆದರೆ ಬಿಬಿಎಂಪಿಯಲ್ಲಿ ಕಸದಿಂದಲೇ ಕೋಟ್ಯಂತರ ಲೂಟಿಯಾಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು.
ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಂದು ಇಂದು ಕರೆಯಲಾಗಿದ್ದ ಪಾಲಿಕೆ ವಿಶೇಷ ಸಭೆಯಲ್ಲಿ ಈ ಆರೋಪ ಮಾಡಿದ ಅವರು, ಕಸ ವಿಲೇವಾರಿಯಲ್ಲಿ ಲೂಟಿಯೇ ನಡೆಯುತ್ತಿದೆ.ನಾವೆಲ್ಲ ಕಣ್ಣಿದ್ದು ಕುರುಡರಾಗಿದ್ದೇವೆ. ಟೆಂಡರ್ ಕರೆಯದೆ ಇದ್ದರೆ ಪಾರದರ್ಶಕತೆ ಎಲ್ಲಿರುತ್ತದೆ ಎಂದರು.
ಡಿಸಿ ಬಿಲ್ ಕೊಡಲಾಗುತ್ತಿದೆ.ಆದರೆ 4ಜಿ ಎಕ್ಸಂಪ್ಷನ್ ಕೊಟ್ಟಿಲ್ಲ. ಟ್ರಸ್ಟ್ ಬಿಲ್ ಸಿಟಿ ಮಾಡುತ್ತಿರುವುದೇ ನಿಮ್ಮ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಿಂಗಳಿಗೆ ಕಸದ ನಿರ್ವಹಣೆಗಾಗಿ 100 ಕೋಟಿ ರೂ.ವೆಚ್ಚವಾಗುತ್ತಿದೆ.ತೆರಿಗೆ ಪಾವತಿಸುವವರಿಗೆ ನಾವು ಲೆಕ್ಕ ಕೊಡಬೇಕಲ್ಲವೇ? ಒಂದು ತಿಂಗಳಿಗೆ ಒಂದು ಟನ್ ಕಸ ವಿಲೇವಾರಿಗೆ 2,32,588 ರೂ. ಖರ್ಚಾಗುತ್ತಿದೆ.ಒಂದು ದಿನಕ್ಕೆ ಒಂದು ಟನ್ ಕಸ ನಿರ್ವಹಣೆಗೆ 7,751 ರೂ.ವೆಚ್ಚವಾಗುತ್ತಿದೆ.ಒಂದು ಕೆಜಿ ಕಸಕ್ಕೆ 7.75 ರೂ.ಖರ್ಚು ಮಾಡುತ್ತೇವೆ ಎಂದು ಹೇಳಿದರು.
ಮಂಡೂರಿನಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದ ಕಾರಣ ಅದನ್ನು ಮುಚ್ಚಬೇಕಾಯಿತು. ಮಂಡೂರು ಸುತ್ತಮುತ್ತಲಿನ ಜಾಗವನ್ನು ಯಾರು ಖರೀದಿಸಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಿಸಿ ಎಂದು ಒತ್ತಾಯಿಸಿದರು.
ಟೆರ್ರಾ ಫಾರಂ ಮುಚ್ಚಿದ್ದು ಯಾವಾಗ? ಮಾವಳ್ಳಿಪುರ ಘಟಕವನ್ನು ಮುಚ್ಚಲಾಗಿದೆ.ನಾಲ್ಕೈದು ಎಕರೆ ಜಾಗದಲ್ಲಿ ಚೀನಾದ ಚೆಂಗಡೂ ಮುನಿಸಿಪಾಲಿಟಿ ವೇಸ್ಟ್ ಟು ಎನರ್ಜಿ ಪ್ಲಾಂಟ್ ಮಾಡಿದೆ.ಇದು ವೈಜ್ಞಾನಿಕವಾಗಿದೆ ಎಂದು ಗಮನಸೆಳೆದರು.
ಹೊಟೇಲ್ ಮಾಲೀಕರಿಗೆ ಕಸ ಸಂಸ್ಕರಣೆ ಮಾಡಲು ಜಾಗ ಕೊಟ್ಟಿದ್ದೀರಿ. ಆದರೆ ಅದನ್ನು ಮಾನಿಟರ್ ಮಾಡುತ್ತಿದ್ದೀರಾ?ಬಲ್ಕ್ ಜನರೇಟರ್‍ಗಳ ಕಸ ನಿರ್ವಹಣೆ ಬಗ್ಗೆ ಮಾನಿಟರ್ ಆಗುತ್ತಿದೆಯಾ?ಎಂದು ಪದ್ಮನಾಭರೆಡ್ಡಿ ಪ್ರಶ್ನಿಸಿದರು.
ಕಮರ್ಷಿಯಲ್ ವೇಸ್ಟೇಜ್‍ನಿಂದ ಶೇ.90ರಷ್ಟು ಬ್ಲಾಕ್ ಸ್ಪಾಟ್ ಆಗುತ್ತಿದೆ.ಕಮರ್ಷಿಯಲ್ ಎಸ್ಟಾಬ್ಲಿಷ್‍ಮೆಂಟ್ ಅವರಿಗೆ ಒಂದೊಂದು ಬುಕ್ ಕೊಡಿ.ಆ ಬುಕ್‍ನಲ್ಲಿ ಅವರು ಸಹಿ ಹಾಕಿ ಬಲ್ಕ್ ಜನರೇಟರ್ ಕಸ ಕಲೆಕ್ಟ್ ಮಾಡಲಿ.ಒಂದು ವೇಳೆ ಹಾಗೆ ಮಾಡದಿದ್ದರೆ ದಂಡ ವಿಧಿಸಿ ಎಂದು ಪದ್ಮನಾಭರೆಡ್ಡಿ ಸಲಹೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ