ಯುವಕನ ಕೊಲೆ ಪ್ರಕರಣ ಬೇಧಿಸಿದ ಪೆÇಲೀಸರು

ಕಡೂರು, ಜು.5- ಕಾಲೇಜು ಯುವಕನ ಕೊಲೆ ಪ್ರಕರಣ ಬೇಧಿಸಿರುವ ಕಡೂರು ಪೆÇಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ವಿವರ: ಕಡೂರಿನ ವರಪ್ರದ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಎಸ್.ವೈ.ರೋಹನ್ (17) ಮೂಲತಃ ಬೀರೂರಿನ ರಾಜಾಜಿನಗರದ ಕಾತ್ಯಾಯಿನಿ ಎಂಬುವವರ ಒಬ್ಬನೇ ಮಗ.
ರೋಹನ್ ತಂದೆ ಯೋಗೀಶ್ವರ್ ಶಿಕ್ಷಕರಾಗಿದ್ದು, ಎರಡು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ರೋಹನ್ ಬೀರೂರಿನ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಹುಡುಗಿಯ ಸಂಬಂಧಿಕರೇ ಆದ ಅಶ್ವಿನ್ ಮತ್ತು ಜೀವನ್ ಇಬ್ಬರ ಸೇರಿಕೊಂಡು ರೋಹನ್ ಕೊಲೆಗೆ ಸಂಚು ರೂಪಿಸಿದ್ದಾರೆ.
ಅದರಂತೆ ರೋಹನ್ ಮಂಗಳವಾರ ಕಾಲೇಜು ಮುಗಿಸಿಕೊಂಡು ಕಾಲೇಜಿನ ಬಸ್‍ನಲ್ಲಿ ಬೀರೂರಿಗೆ ಹೊರಡುವ ಮುಂಚೆ ಆತನನ್ನು ಕರೆದು ಅಲ್ಲಿಯೇ ನಿಲ್ಲಿಸಿಕೊಂಡಿದ್ದ ಮಾರುತಿ ಕಾರಿನಲ್ಲಿ ಕೂರಿಸಿಕೊಂಡು ಹೊರಟಿದ್ದಾರೆ. ಇವರ ಸ್ನೇಹಿತ ಅಮಿತ್ ದ್ವಿಚಕ್ರವಾಹನದಲ್ಲಿ ಹಿಂಬಾಲಿಸಿದ್ದಾನೆ.
ಎಮ್ಮೆದೊಡ್ಡಿಯಿಂದ ಬೀರೂರಿಗೆ ಹೋಗುವ ರಸ್ತೆಯಲ್ಲಿ ಒಂದೆಡೆ ರೋಹನ್‍ನನ್ನು ಹುಡುಗಿಯ ವಿಚಾರವಾಗಿ ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದು ರೋಹನ್ ಕುತ್ತಿಗೆಗೆ ಮೊದಲೇ ಕಾರಿನಲ್ಲಿದ್ದ ವೇಲ್ ಬಿಗಿದ ಜೀವನ್ ಮತ್ತು ಅಶ್ವಿನ್ ರೋಹನ್‍ನನ್ನು ಕೊಲೆ ಮಾಡಿದ್ದು, ಆ ವೇಳೆಗೆ ಅಲ್ಲಿಗೆ ಬಂದ ಅಮಿತ್ ಸಹ
ಸಹಕರಿಸಿದ್ದಾನೆ. ನಂತರ ರೋಹನ್ ಮೃತದೇಹವನ್ನು ಚೀಲದೊಳಗೆ ಹಾಕಿ ಲಿಂಗದಹಳ್ಳಿ ರಸ್ತೆಯ ಸಂತವೇರಿ ಬಳಿಯ ಸೇತುವೆ ಬಳಿ ಎಸೆದು ಕಡೂರಿಗೆ ಬಂದಿದ್ದಾರೆ.
ಇತ್ತ ಬೀರೂರಿನಲ್ಲಿ ರೋಹನ್ ಮನೆಗೆ ಬಂದಿಲ್ಲ ಎಂಬ ಆತಂಕದಲ್ಲಿ ತಾಯಿ ಕಾತ್ಯಾಯಿನಿ ಆತನಿಗಾಗಿ ಶೋಧ ಆರಂಭಿಸಿದ್ದಾರೆ. ಆತನ ಬಗ್ಗೆ ಸುಳಿವು ಸಿಗದೆ ಇದ್ದ ಸಮಯದಲ್ಲಿ ಆವರಿಗೊಂದು ದೂರವಾಣಿ ಕರೆ ಬರುತ್ತದೆ. ನಿಮ್ಮ ಮಗ ರೋಹನ್ ನಮ್ಮ ವಶದಲ್ಲಿದ್ದಾನೆ. 15 ಲಕ್ಷ ಕೊಟ್ಟರೆ ಬಿಡುತ್ತೇವೆ. ಕೂಡಲೇ ಕಡೂರು-ಬೀರೂರು ಮಧ್ಯೆ ಡೈರಿ ಸಮೀಪ ಹಣ ತನ್ನಿ ಎಂದು ಹೇಳಿದಾಗ ಗಾಬರಿಯಾದ ಕಾತ್ಯಾಯಿನಿ ಅವರು ಕಡೂರು ಪೆÇಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಕಡೂರು ಪೆÇಲೀಸ್ ವೃತ್ತ ನಿರೀಕ್ಷಕ ಕೆ.ಸತ್ಯನಾರಾಯಣ ಮತ್ತು ಪಿಎಸ್‍ಐ ರಾಕೇಶ್ ಮತ್ತು ಸಿಬ್ಬಂದಿ ಸುಳಿವುಗಳನ್ನಾಧರಿಸಿ ಜೀವನ್ ಮತ್ತು ಅಶ್ವಿನ್‍ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಪ್ರಕರಣದ ವಿವರ ಹೊರಬಂದಿದೆ.
ಜೀವನ್ ಜಿಪಂ ಮಾಜಿ ಸದಸ್ಯ ಬಿ.ಪಿ.ನಾಗರಾಜ್ ಅವರ ಮಗ ನಾಗಿದ್ದು, ಈತ ಬೆಂಗಳೂರಿನ ಕಾಲೇಜೊಂದರಲ್ಲಿ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದಾನೆ. ಅಶ್ವಿನ್ ಪಿಯು ಮುಗಿಸಿದ್ದು ಎಂಜಿನಿಯರಿಂಗ್ ಸೇರಲು ಸಿದ್ಧತೆಯಲ್ಲಿದ್ದ. ಅಮಿತ್ ಸಹ ರೋಹನ್ ಓದುತ್ತಿದ್ದ ಕಾಲೇಜಿನಲ್ಲಿಯೇ ದ್ವಿತೀಯ ಪಿಯುಸಿ ಓದುತ್ತಿದ್ದನೆಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ