ಹಾಸನ, ಜು.5- ಶೈಕ್ಷಣಿಕ ವರ್ಷಗಳಲ್ಲಿ ಮನಸ್ಸು ಅತ್ತಿತ್ತ ವಾಲದಂತೆ ಚಂಚಲ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದರೆ ಬದುಕಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ
ಕಿವಿ ಮಾತು ಹೇಳಿದರು.
ನಗರದ ವೆಂಕಟೇಶ್ವರ ಕಲಾ ಭವನದಲ್ಲಿ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ 2018-19 ನೇ ಸಾಲಿನ ಸಿಇಟಿ ಎನ್ಇಇಟಿ, ಜೆಇಇ ತರಬೇತಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಹಳಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಶೈಕ್ಷಣಿಕ ವರ್ಷದ ಸಾಂಸ್ಕøತಿಕ ಕಾರ್ಯಕ್ರಮಗಳನ್ನ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಹಣ ಆಸ್ತಿಯನ್ನು ಕೂಡಿಟ್ಟು ಕೊಡುವುದಕ್ಕಿಂತ ಅವರ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜಕ್ಕೆ ಸತ್ ಪ್ರಜೆಗಳನ್ನು ನೀಡುವ ಜವಾಬ್ದಾರಿ ಪೆÇೀಷಕರ ಮೇಲಿದೆ. ಮಕ್ಕಳ ಮುಂದೆ ತಂದೆ ತಾಯಿಯರು ಜೀವನ ಶೈಲಿ ಮಾದರಿಯಾಗಿರಬೇಕೆ ವಿನಹ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಿರಬಾರದು ಎಂದು ತಿಳಿ ಹೇಳಿದರು. ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಬೇಕೆಂಬ ಆಸೆ ಇಟ್ಟುಕೊಳ್ಳುವುದು ತಂದೆ ತಾಯಿಯರ ಸಹಜ ಗುಣವಾದರೂ ಅಂಕಪಟ್ಟಿಯಲ್ಲಿ ಮಕ್ಕಳು ಹೆಚ್ಚು ಅಂಕ ಗಳಿಸುವ ಅಪೇಕ್ಷೆಗಿಂತ ತಮ್ಮ ಮಕ್ಕಳ ಚಲನವಲನಗಳು ಅವರ ಸಹಪಾಠಿಗಳತ್ತ ಗಮನ ಹರಿಸುವುದು ಅತ್ಯಗತ್ಯ ಎಂದರು.
ಆದಿಚುಂಚನಗರಿ ಹಾಸನ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ, ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೊಹದ ಸಂಕಲ್ಪ ಮಾಡಿದ ಭೆರವೈಕ್ಯ ಡಾ ಬಾಲಗಂಗಾದರನಾಥ ಶ್ರೀಗಳ ದೂರ ದೃಷ್ಟಿಯ ಕನಸು ಇಂದು ಫಲ ನೀಡುತ್ತಿದ್ದು ನಾಡಿನ ಉದ್ದಗಲಕ್ಕೂ ಇರುವ ಚುಂಚನಗರಿ ಶಿಕ್ಷಣ ಸಂಸ್ಥೆಗಳಲ್ಲಿ ಲP್ಷÁಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ನಮ್ಮ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಪುಸ್ತಕಗಳ ವಿಷಯಗಳನ್ನಷ್ಟೇ ಭೋದನೆ ಮಾಡುತ್ತಿಲ್ಲ ಸಂಸ್ಕಾರ ಯುತ ಶಿಕ್ಷಣವನ್ನ ನೀಡುತ್ತಿದೆ. ಇದರಿಂದಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಗೌರವ ಮತ್ತು ಆದ್ಯತೆ ದೊರೆಯುತ್ತಿದೆ ಇದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಕಳೆದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 9 ನೇ ರ್ಯಾಂಕ್ ಬಂದ ವಿದ್ಯಾರ್ಥಿ ಗೌತಮ್ ಜಿ.ಕೆ. ಸೇರಿದಂತೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ನಡೆಸಿಕೊಟ್ಟು ಸಾಂಸ್ಕøತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
ಸಮಾರಂಭದಲ್ಲಿ ಆದಿಚುಂಚನಗರಿ ಆದಿಹಳ್ಳಿ ಶಾಖಾಮಠದ ಶಿವಪುತ್ರನಾಥ ಸ್ವಾಮೀಜಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್ ಅನಂತ್ ಕುಮಾರ್, ಆದಿ ಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲಿಂಗರಾಜು , ಪ್ರಾಥಮಿಕ ಆಂಗ್ಲ ಶಾಲೆಯ ಮುಖ್ಯ ಶೀಕ್ಷಕಿ ಜ್ಞಾನೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.