ಪ್ರತಿ ರೈತ ಕುಟುಂಬದ 2 ಲಕ್ಷದ ವರೆಗಿನ ಸಾಲ ಮನ್ನಾ

ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಅನ್ನು ವಿತ್ತ ಸಚಿವರೂ ಆದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಗುರುವಾರ ಮಂಡಿಸಿದ್ದು, ರೈತರ ಸಾಲ ಮನ್ನಾ ಬಗ್ಗೆ ಘೋಷಣೆ ಮಾಡಿದ್ದಾರೆ.

ರೈತರ ಸಾಲ ಮನ್ನಾ ಮಾಡಲು ನಮ್ಮ ಸರ್ಕಾರದ ಮೊದಲ ಆದ್ಯತೆ ನೀಡುತ್ತದೆ ಎಂದ ಅವರು, ಪ್ರತಿ ರೈತ ಕುಟುಂಬದ 2 ಲಕ್ಷ ರೂ.ಗಳವರೆಗಿನ ಸಾಲ ಮನ್ನಾ ಮಾಡುವುದಾಗಿ ತಿಳಿಸಿದರು.

ಒಟ್ಟು 22,27,506 ಮಂದಿ ಸಾಲಮನ್ನಾ ಯೋಜನೆಯ ಫಲಾನುಭವಿ ರೈತರಿದ್ದು, ಇವರ ಸಾಲ ಮನ್ನಾಕ್ಕಾಗಿ ಒಟ್ಟು 34,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.

2017ರ ಡಿಸೆಂಬರ್ ವರೆಗಿನ ರೈತರ ಎಲ್ಲ ಸುಸ್ತಿ ಸಾಲ ಮನ್ನಾ ಮಾಡಲಾಗುತ್ತದೆ. ಮಾತ್ರವಲ್ಲದೇ ರೈತರು ಈಗಾಗಲೇ ಬೆಳೆ ಸಾಲ ಪಾವತಿಸಿದ್ದರೆ. ಅಂತಹ ರೈತರ ಬ್ಯಾಂಕ್ ಖಾತೆಗೆ 25,000 ರೂ.ಗಳವರಗೆ ಹಣ ಜಮಾ ಮಾಡಲಾಗುತ್ತದೆ. ಇದೇ ವೇಳೆ ತೆರಿದಾರ ರೈತರ ಸಾಲ ಮನ್ನಾ ಮಾಡಲಾಗದು ಎಂದು ತಿಳಿಸಿದರು.

ಅಂತೆಯೇ ಸಾಲ ಮನ್ನಾಗೆ ಈವರೆಗೆ 4972 ಕೋಟಿ ರೂ. ಬಿಡುಗಡೆಯಾಗಿದ್ದು, ಹಿಂದಿನ ಸರ್ಕಾರದ ಸಾಲ ಮನ್ನಾದ ಹಣವನ್ನು ಪೂರ್ಣ ಪಾವತಿ ಮಾಡಲಾಗುತ್ತದೆ ಎಂದು ಹೇಳಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ